ಬಜಪೆ: ಕೆಂಜಾರು ಶ್ರೀ ರಾಮಾಂಜನೇಯ ದೇವಸ್ಥಾನದ ಹಿಂಬದಿಯ ಮರದ ಬಾಗಿಲನ್ನು ಕಲ್ಲಿನಿಂದ ಮುರಿದು ಮುರಿದು ದೊಡ್ಡ ಕಾಣಿಕೆ ಡಬ್ಬಿಯಲ್ಲಿದ್ದ ಹಣ ಹಾಗೂ ಇತರ ಎರಡು ಡಬ್ಬಿಗಳನ್ನು ಕಳವು ಮಾಡಿದ ಘಟನೆ ಮಾ.3ರಂದು ರಾತ್ರಿ ಸುಮಾರು 1.55ಕ್ಕೆ ನಡೆದಿದೆ. ದೊಡ್ಡ ಕಾಣಿಕೆ ಡಬ್ಬಿಯನ್ನು ಹೊರ ತಂದು ಅದನ್ನು ಒಡೆದು ಅದರಲ್ಲಿದ್ದ ಹಣ ಹಾಗೂ ಇತರ ಎರಡು ಕಾಣಿಕೆ ಡಬ್ಬಿಗಳನ್ನು ಕಳವು ಮಾಡಿರುವುದು ಅಲ್ಲಿದ್ದ ಸಿಸಿಕೆಮರಾದಲ್ಲಿ ಸೆರೆಯಾಗಿದೆ. ಸುಮಾರು 50 ಸಾವಿರ ರೂ. ಕಳವಾಗಿದೆ ಎಂದು ದೇಗುಲದ ಆಡಳಿತ ಮಂಡಳಿಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದೆ. ಕಳ್ಳನು ಮಾಸ್ಕ್, ತಲೆಯನ್ನು ಮುಚ್ಚುವಂತಹ ಟೀಶರ್ಟ್ ಧರಿಸಿರುವುದು ಕೈಗೆ ಗ್ಲೌಸ್, ಕಾಲಿಗೆ ಲಾಕ್ಸ್ ಹಾಗೂ ಚಪ್ಪಲಿ ಧರಿಸಿದ್ದ. ಸ್ಥಳಕ್ಕೆ ಬಜಪೆ ಪೊಲೀಸರು ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

