ಚಿತ್ರದುರ್ಗ: ಜಮೀನು ವಿವಾದದ ಹಿನ್ನೆಲೆ ಭೀಕರ ಕೊಲೆ ನಡೆದಿದ್ದು, ತಾಲೂಕಿನ ಕಡ್ಲೆಗುದ್ದು ಗ್ರಾಮದಲ್ಲಿ ರೈತನೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮೃತ ರೈತನನ್ನು ವೀರಣ್ಣ ಎಂದು ಗುರುತಿಸಲಾಗಿದ್ದು, ಸಂಬಂಧಿಕರ ನಡುವೆ ನಡೆದ ಹಳೆಯ ದ್ವೇಷವೇ ಈ ಹತ್ಯೆಗೆ ಕಾರಣವಾಗಿದೆ. ಕಾಂತರಾಜ್ ಹಾಗೂ ಅವನ ಮಗನೊಂದಿಗೆ ಜಮೀನು ವಿಚಾರವಾಗಿ ಉಂಟಾದ ಜಗಳದಲ್ಲಿ, ಹಿಂದೆ ವೀರಣ್ಣ ಕಾಂತರಾಜ್ ಮೇಲೆ ಹಲ್ಲೆ ನಡೆಸಿದ್ದನು. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಕಾಂತರಾಜ್ ಮಗ, ಇಂದು ವೀರಣ್ಣ ಹೊಲದಲ್ಲಿ ಇದ್ದಾಗ ಮಚ್ಚಿನಿಂದ ದಾಳಿ ಮಾಡಿ ಕೊಲೆ ಮಾಡಿದ್ದಾನೆ. ಘಟನೆಯ ಕುರಿತು ಮಾತನಾಡಿದ ಮೃತನ ಸಂಬಂಧಿ ಮೋಹನ್ ಕುಮಾರ್, “ಆರೋಪಿಯು ಕೆಲವು ತಿಂಗಳಿಂದ ಮಚ್ಚಿ ಹಿಡಿದು ಊರಲ್ಲೇ ಓಡಾಡುತ್ತಿದ್ದ. ಪೊಲೀಸರಿಗೆ ಮಾಹಿತಿ ನೀಡಿದರೂ ಕ್ರಮ ಕೈಗೊಂಡಿಲ್ಲ” ಎಂದು ಆರೋಪಿಸಿದ್ದಾರೆ. ಈ ಘಟನೆ ಗ್ರಾಮದಲ್ಲಿ ಆತಂಕ ಮೂಡಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

