50 ಸಾವಿರ ಬೇಡಿಕೆ ಆರೋಪ – ಕೊನೆಗೆ ₹1,200ಕ್ಕೆ ಡೀಲ್ ಮಾಡಿದ ಶಾಕ್ ಪ್ರಕರಣ!
ಪ್ರೇಮಿಗಳನ್ನೇ ಟಾರ್ಗೆಟ್ ಮಾಡಿದ ಟ್ರಾಫಿಕ್ ಪೊಲೀಸರು..?
ಬ್ಲಾಕ್‌ಮೇಲ್ ಆರೋಪ!”50 ಸಾವಿರ ಬೇಡಿಕೆ, 1200ಕ್ಕೆ ಡೀಲ್ ಬೈಪಾಸ್ ಬಳಿ ಶಾಕ್ ಘಟನೆ! ಗಸ್ತು ಹೆಸರಿನಲ್ಲಿ ಬ್ಲಾಕ್‌ಮೇಲ್ ಆಟ..?
ಪೊಲೀಸರ ವಿರುದ್ಧ ಗಂಭೀರ ಆರೋಪ..ಸುಗಮ ಸಂಚಾರದ ಬದಲು ಕಿರುಕುಳ..?

ಪ್ರೇಮಿ ಜೋಡಿಗೆ ಕಹಿ ಅನುಭವ.. ಬೈಪಾಸ್ ರಸ್ತೆಯಲ್ಲಿ ನಿಂತಿದ್ದ ಪ್ರೇಮಿ ಜೋಡಿಯನ್ನು ಗುರಿಯಾಗಿಸಿಕೊಂಡು ಟ್ರಾಫಿಕ್ ಪೊಲೀಸರು ಬ್ಲಾಕ್‌ಮೇಲ್ ಮಾಡಿದ ಆರೋಪ ಕೇಳಿಬಂದಿದೆ. ಕೆಲವೇ ದಿನಗಳ ಹಿಂದೆ ನಿಶ್ಚಿತಾರ್ಥವಾಗಿದ್ದ ಜೋಡಿ ಅಲ್ಲಿ ನಿಂತಿದ್ದ ವೇಳೆ, ಅವರಿಂದ ₹50,000 ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ…
ನಂತರ ಇಲ್ಲ ಅಂದ್ರೆ ₹5,000 ಕೊಡಿ” ಎಂದು ಒತ್ತಾಯ ಮಾಡಿದ್ದು, ಕೊನೆಗೆ ₹1,200 ಪಡೆದುಕೊಂಡು ಬಿಡಿಸಿದ ಘಟನೆ ಬೆಳಕಿಗೆ ಬಂದಿದೆ…
ಸುಗಮ ಸಂಚಾರ ಕಾಪಾಡಬೇಕಾದವರು ಈ ರೀತಿಯ ವರ್ತನೆ ತೋರಿದರೆ ಜನರಲ್ಲಿ ಭಯ ಹಾಗೂ ಅಸಮಾಧಾನ ಹೆಚ್ಚಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತಕ್ಷಣ ಕ್ರಮ ಕೈಗೊಳ್ಳುವರಾ ಎಂಬುದು ಈಗ ಗಮನ ಸೆಳೆಯುತ್ತಿದೆ.
ಪೀಡಿತ ವ್ಯಕ್ತಿ ಈ ಘಟನೆ ಬಗ್ಗೆ ಡಿಸಿಪಿ ಸಾಹೇಬ್ ಅವರಿಗೆ ಫೋನ್ ಮೂಲಕ ಮಾಹಿತಿ ನೀಡಿದ್ದು, “ನನಗೆ ಈ ರೀತಿಯ ಅನ್ಯಾಯವಾಗಿದೆ” ಎಂದು ಗೋಳನ್ನು ವ್ಯಕ್ತಪಡಿಸಿದ್ದಾನೆ. ಈ ಬಗ್ಗೆ ಡಿಸಿಪಿ ಗಮನ ಹರಿಸಿರುವುದಾಗಿ ತಿಳಿದುಬಂದಿದ್ದು, ಈಗ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

