Breaking News

ಪೊಲೀಸರ ಮೇಲೆಯೇ ದಾಳಿ: ಕೊಲೆ ಆರೋಪಿ ಮೇಲೆ ಫೈರಿಂಗ್

ಕಲಬುರಗಿ: ಪೊಲೀಸರ ಮೇಲೆಯೇ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ ಕೊಲೆ ಆರೋಪಿ ಮೇಲೆ ಫೈರಿಂಗ್ ಮಾಡಲಾಗಿದೆ. ಈಶ್ವರ್ ರಾಥೋಡ್ ಕಾಲಿಗೆ ಫೈರಿಂಗ್ ಮಾಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಟೇಷನ್ ಬಜಾರ್ ಠಾಣೆ ಪೋಲಿಸರು ಕೊಲೆ ಆರೋಪಿ ಈಶ್ವರ್ ರಾಥೋಡ್ ಎರಡು ಕಾಲಿಗೆ ಗುಂಡು ಹಾರಿಸಿದ್ದಾರೆ. ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಉದ್ಯಮಿ ಅನಿಲ್ ರಾಥೋಡ್ ಕೊಲೆ ನಡೆದಿತ್ತು. ಕೊಲೆ ನಡೆದ ಎರಡು ದಿನದಲ್ಲಿ ಆರೋಪಿ ಈಶ್ವರ್ ರಾಥೋಡ್ ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದಾರೆ. ಆತನನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಮೇಲೆ ದಾಳಿ ನಡೆಸಿದ್ದು, ಆತ್ಮರಕ್ಷಣೆಗಾಗಿ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಕೊಲೆ ಆರೋಪಿ ಈಶ್ವರ್ ರಾಥೋಡ್ ನನ್ನು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Share News

About BigTv News

Check Also

ಜೊಂಬಿ ಡ್ರಗ್ಸ್ ಸುಳ್ಳು ಸುದ್ದಿ, ವಿಡಿಯೋ ವೈರಲ್ ಮಾಡಿದವನನ್ನ ಅರೆಸ್ಟ್ ಮಾಡಲಾಗಿದೆ : ಜಿ.ಪರಮೇಶ್ವರ್

ಬೆಂಗಳೂರು : ಜೊಂಬಿ ಡ್ರಗ್ಸ್ ಸೇವಿಸುತ್ತಿದ್ದ ಎಂಬ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಮಿಷನರ್ ರಿಂದ ಪ್ರಕರಣದ ಬಗ್ಗೆ ಮಾಹಿತಿ …

Leave a Reply

Your email address will not be published. Required fields are marked *