Breaking News

ಪ್ರೀತಿಸಿ ಮದುವೆಯಾದ ಪತ್ನಿ ಆತ್ಮಹತ್ಯೆ; ಪತಿ, ಅತ್ತೆ ವಿರುದ್ಧ ದೂರು ದಾಖಲು

ಹಿರೇಕೆರೂರ: ಪ್ರೀತಿಸಿ ಮದುವೆ ಮಾಡಿಕೊಂಡ ಪತಿ ವರದಣೆ ನೀಡುವಂತೆ ಕಿರುಕುಳ ನೀಡಿದ್ದರಿಂದ ಮನನೊಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಟನೆ ತಾಲೂಕಿನ ಹಾದ್ರಿಹಳ್ಳಿಯಲ್ಲಿ ನಡೆದಿದೆ. ಶಿಲ್ಪಾ (ಅನುಷಾ) ಪ್ರದಿಪಸ್ವಾಮಿ ಹಿರೇಮಠ (27) ಮೃತ ಪತ್ನಿ. ಪ್ರಕರಣಕ್ಕೆ ಸಂಬಂಧಿಸಿ ಈಕೆಯ ಪತಿ ಪ್ರದಿಪಸ್ವಾಮಿ ಮಲ್ಲಿಕಾರ್ಜುನಯ್ಯ ಹಿರೇಮಠ ಹಾಗೂ ಅತ್ತೆ ಲತಾ ಮಲ್ಲಿಕಾರ್ಜುನಯ್ಯ ಹಿರೇಮಠ ವಿರುದ್ಧ ಮೃತಳ ಸಂಬಂಧಿಕರು ದೂರು ದಾಖಲಿಸಿದ್ದಾರೆ. ಪ್ರದಿಪಸ್ವಾಮಿ ನನ್ನ ಮಗಳನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಾನೆ. ಆರಂಭದಲ್ಲಿ ಚನ್ನಾಗಿ ನೋಡಿಕೊಂಡು ನಂತರದ ದಿನದಲ್ಲಿ “ನೀನು ಪ್ರೀತಿಸಿ ಮದುವೆ ಮಾಡಿಕೊಂಡು ಬಂದಿದ್ದೀಯಾ. ವರದಣೆ ತಂದಿಲ್ಲ. ನಮಗೆ ವರದಣೆ ತಂದು ಕೊಡಬೇಕು. ದುಡಿದು ಹಣ ಕೊಡಬೇಕು’ ಎಂದು ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಇದರಿಂದ ಶಿಲ್ಪಾಳ ಕುಟುಂಬದವರು 7 ತೊಲೆ ಚಿನ್ನಾಭರಣವನ್ನು ವರದಣೆಯಾಗಿ ನೀಡಿದ್ದರು. ಅಲ್ಲದೆ ಶಿಲ್ಪಾ ಬ್ಯಾಂಕ್ವೊಂದರಲ್ಲಿ ಕೆಲಸ ಸೇರಿಕೊಂಡಿದ್ದಳು. ಅದರಿಂದ ಬಂದ ಸಂಬಳವನ್ನು ಅವರಿಗೆ ನೀಡುತ್ತಿದ್ದಳು. ಆದರೆ, ಪ್ರದಿಪಸ್ವಾಮಿ ತನ್ನ ದುಡಿಮೆ ಬಿಟ್ಟು ಮದ್ಯ ಸೇವಿಸುವ ಚಟಕ್ಕೆ ಅಂಟಿಕೊಂಡು ಶಿಲ್ಪಾಳಿಗೆ ತೊಂದರೆ ನೀಡಿದ್ದಾರೆ. ಇದರಿಂದ ಆಕೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕುರಿತು ಹಿರೇಕೆರೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *