Breaking News

ಸೈಕಲ್ ಸರ್ಕಸ್‌ನಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಹಲ್ಲೆ

ಕಾರ್ಕಳ: ಸೈಕಲ್ ಸರ್ಕಸ್‌ನಲ್ಲಿ ಡ್ಯಾನ್ಸ್ ಮಾಡಿ ಊರಿನ ಮರ್ಯಾದೆ ತೆಗೆದಿದ್ದೀಯಾ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಕುಕ್ಕುಂದೂರು ಗ್ರಾಮದ ದುರ್ಗಾನಗರದಲ್ಲಿ ನಡೆದಿದೆ. ಕುಕ್ಕುಂದೂರಿನ ವಿಜಯ ಕುಮಾರ್ (40) ಹಲ್ಲೆಗೊಳಗಾದವರು. ದುರ್ಗಾ ನಗರದಲ್ಲಿ ನಡೆದ ಸೈಕಲ್ ಸರ್ಕಸ್‌ನಲ್ಲಿ ಡ್ಯಾನ್ಸ್ ಮಾಡಿ ಮನೆಗೆ ಮರಳುತ್ತಿದ್ದಾಗ, ಗುರುಪ್ರಸಾದ್, ಶಿವ ಹಾಗೂ ದಯಾನಂದ ಅವರು ಅಡ್ಡಗಟ್ಟಿ ನಿಂದಿಸಿ, ಹೊಡೆದು ನೆಲಕ್ಕೆ ತಳ್ಳಿದ್ದಾರೆ ಎಂದು ಆರೋಪಿಸಲಾಗಿದೆ. ನೆಲಕ್ಕೆ ಬಿದ್ದಾಗ ವಿಜಯ ಅವರ ತಲೆಗೆ ತೀವ್ರ ರಕ್ತಗಾಯವಾಗಿದೆ. ಗಾಯಾಳು ಮೊದಲು ಕಾರ್ಕಳ ಸರಕಾರಿ ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬೆಂಗಳೂರು: ಪಬ್‌ನಲ್ಲಿ ಲೈಟರ್ ಕೇಳಿ ಪರಿಚಯವಾದ ರಾಜಸ್ಥಾನದ ಯುವತಿಯ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪಿಯ ಬಂಧನ

ಬೆಂಗಳೂರು: ರಾಜಸ್ಥಾನದ ಜೈಪುರದಿಂದ ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬರಿಗೆ ಕೋರಮಂಗಲದ ಪಬ್‌ನಲ್ಲಿ ಸಮೀರ್ ಎಂಬಾತ ಪರಿಚಯವಾಗಿದ್ದಾನೆ. ಸಿಗರೇಟ್ ಸೇದಲು ಲೈಟರ್ ಕೇಳಿದಾಗ …

Leave a Reply

Your email address will not be published. Required fields are marked *