ಕಲಬುರಗಿ: ಹಣ ದ್ವಿಗುಣ ಗೊಳಿಸುವುದಾಗಿ ನಂಬಿಸಿ ಮಹಿಳೆಯೊಬ್ಬರು 32 ಜನರಿಗೆ ₹2.90 ಕೋಟಿ ವಂಚಿಸಿರುವ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಸಭಾಫಂಕ್ಷನ್ ಹಾಲ್ ಹತ್ತಿರದ ನಿವಾಸಿ ಮಿರಾಜ ಬೇಗಂ ಸೈಯದ್ ಸಮೀರ ಖಾನ್ ಅವರ ವಿರುದ್ಧ ಸಮಾಜ ಸೇವಕಿ ಫಾತಿಮಾ ಖಾನ್ ಫಿರೋಜ ಖಾನ್ ದೂರು ನೀಡಿದ್ದಾರೆ. ‘ಖಾಸಗಿ ಕಂಪನಿಯ ಏಜೆನ್ಸಿ ಇದ್ದು, ಹಣ ಕೊಟ್ಟರೆ ಹೆಚ್ಚಿನ ಹಣ ಮರಳಿಸುವ ಆಮಿಷ ಒಡ್ಡಿದ್ದರು. ಫೆ.6ರಂದು ₹10 ಲಕ್ಷ ಕೊಟ್ಟಿದ್ದೇನೆ. ಇನ್ನೂ 31 ಜನ ಹಣನೀಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

