ಚಿಕ್ಕೋಡಿ: ಬೈಕಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಬ್ಬ ಸಾವನ್ನಪ್ಪಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಅಥಣಿ ತಾಲೂಕಿನ ರಡ್ಡೆರಟ್ಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.ನಾಗನೂರ ಪಿಕೆ ಗ್ರಾಮದ ಬಸಪ್ಪಾ ಮಲ್ಲಪ್ಪಾ ನಡುವಿನಮನಿ ೪೫ ಮೃತ ವ್ಯಕ್ತಿ ವ್ಯಕ್ತಿ ಎಂದು ಗುರುತಿಸಲಾಗಿದೆ.ವಿಠ್ಠಲ ಗಂಗಪ್ಪಾ ಕೋಟೆ ೩೦ ಅವರಖೋಡ,ಅಪ್ಪಣ್ಣಾ ಬಿ ನಡುವಿನಮನಿ ೩೩, ಪಿ ಕೆ ನಾಗನೂರರಮೇಶ ಎಲ್ ಕೋಳಿ ೨೬ ಅವರಖೋಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಥಣಿಯಿಂದ ನಾಗನೂರ ಗ್ರಾಮದಕ್ಕೆ ತೆರಳುವಾಗ ಅವರಖೋಡದಿಂದ ಬರುವ ಎರಡು ಬೈಕಗಳ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಗಾಯಾಳುಗಳಿಗೆ ಅಥಣಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಹಾರಾಷ್ಟ್ರ ಮಿರಜಗೆ ರವಾನಿಸಲಾಗಿದೆ. ಅಥಣಿ ಪೋಲಿಸ್ ಠಾಣೆ ಸರಹದ್ದಿನಲ್ಲಿ ನಡೆದ ಘಟನೆ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





