ಮಂಗಳೂರು: ಶಕ್ತಿನಗರದ ರಾಜೀವ ನಗರ ಬಳಿ ಮತ್ತು ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣ ಬಳಿ ಗಾಂಜಾ ಸೇವನೆ ಮಾಡಿದ ಆರೋಪದಡಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಶಕ್ತಿನಗರದ ರಾಜೀವನಗರ ಬಳಿ ಶಕ್ತಿನಗರ ಮುಗ್ರೋಡಿ ನಿವಾಸಿ ರಾಹುಲ್ (28) ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ನಗರದ ಸೆಂಟ್ರಲ್ ರೈಲು ನಿಲ್ದಾಣ ಬಳಿ ವೆಲೆನ್ಸಿಯಾ ಸೂಟರ್‌ಪೇಟೆ ನಿವಾಸಿ ಜೇಸನ್ ಮಾಡ್ತ (23), ಬಿಕರ್ನಕಟ್ಟೆ ಕಲ್ಪನೆ ನಿವಾಸಿ ನೆಲ್ಸನ್ (24) ಮತ್ತು ಮುಳಿಹಿತ್ಲು ಅರೇಕೇಬೆಟ್ಟು ನಿವಾಸಿ ಪ್ರತೀಕ್ (24)ರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

