Breaking News

ಸಮಸ್ಯೆಗೆ ಸ್ಪಂಧನೆ ಮಾಡದಿದ್ದರೆ ಸಿಎಂ ಕುಮಾರಸ್ವಾಮಿ ಅವರಿಗೆ ಘೇರಾವ್ ಇಲ್ಲವೇ ಕಪ್ಪು ಪಟ್ಟಿ ಪ್ರದರ್ಶನ

ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಮಾಗನೂರ,ಗುರುಮಠಕಲ್ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಗೆ ಸಿಎಂ ಕುಮಾರಸ್ವಾಮಿ ಅವರು ಇದೆ 21 ರಂದು ಬರುತ್ತಿರುವದು ಸಂತೋಷದ ವಿಷಯ, ಸಿಎಂ ಒಂದು ವರ್ಷದ ಮೇಲೆ ಯಾದಗಿರಿ ಬಗ್ಗೆ ಕಣ್ಣು ತೆರೆದಿದ್ದಾರೆ, ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇದೆ, ಸಿಎಂ ಕುಮಾರಸ್ವಾಮಿ ಶಾಲೆಯಲ್ಲಿ ವಾಸ್ತವ್ಯ ಮಾಡಬೇಕೆಂದ್ರೆ ಯೋಚನೆ ಮಾಡಬೇಕಿತ್ತು, ಚಂಡರಕಿ ಶಾಲೆಯು ಅತಿ ಹೈಟೇಕ್ ಸೌಕರ್ಯವಿದೆ, ಕೇವಲ ಒಂದು ಶಾಲೆಯಲ್ಲಿ ವಾಸ್ತವ್ಯ ಮಾಡಿದ್ರೆ ಶಾಲೆಯ ಸಮಸ್ಯೆ ಪರಿಹಾರವಾಗುತ್ತದಾ?. ಜಿಲ್ಲೆಯಿಂದ ಸಾಕಷ್ಟು ಜನ ಕೆಲಸ ಅರಸಿ ಗುಳೇ ಹೋಗುತ್ತಿದ್ದಾರೆ, ಕೈಗಾರಿಕಾ ಸ್ಥಾಪನೆ ಮಾಡುವ ಬಗ್ಗೆ ಸಿಎಂ ಕುಮಾರಸ್ವಾಮಿ ಸಭೆ ನಡೆಸಿ, ಕಡೆಚೂರ- ಬಾಡಿಹಾಳ ಕೈಗಾರಿಕೆ ಪ್ರದೇಶಕ್ಕೆ ಭೇಟಿ ನೀಡಬೇಕು, ಹಾಗೂ ಜಿಲ್ಲೆಯಲ್ಲಿರುವ ಶುದ್ದು ಕುಡಿಯುವ ನೀರು ಜನರಿಗೆ ಸಿಗುತ್ತಿಲ್ಲ, ಜಿಲ್ಲಾಸ್ಪತ್ರೆ ಐಸಿಯು ಹಾಗೂ ಅಗತ್ಯ ಸೌಕರ್ಯವಿಲ್ಲ, ಸಿಎಂ ಶಾಲೆಯಲ್ಲಿ ವಾಸ್ತವ್ಯ ಮಾಡುವದಾದರೆ ಶಿಕ್ಷಕರ ಸಮಸ್ಯೆ ನಿಗಿಸಬೇಕಾಗಿದೆ,ಜಿಲ್ಲೆಯ ರೈತರ ಸಾಲ ಮನ್ನಾ ವಾಪಸ್ ಪಡೆದ ವಿಚಾರವಾಗಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು,ಸಿಎಂ ಕುಮಾರಸ್ವಾಮಿ ರೈತರಿಗೆ ಸಾಲ ಮನ್ನಾ ವಿಚಾರದಲ್ಲಿ ಮೋಸ ಮಾಡಿದ್ದಾರೆ. ಸಮಸ್ಯೆಗೆ ಸ್ಪಂಧನೆ ಮಾಡದಿದ್ದರೆ ಸಿಎಂ ಕುಮಾರಸ್ವಾಮಿ ಅವರಿಗೆ ಘೇರಾವ್ ಇಲ್ಲವೇ ಕಪ್ಪು ಪಟ್ಟಿ ಪ್ರದರ್ಶನ ಮಾಡುತ್ತೆವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಮಾಗನೂರ ಎಚ್ಚರಿಸಿದರು.

Share News

About admin

Check Also

ಯಾದಗಿರಿ: ಅಂಗನವಾಡಿ ಸಹಾಯಕಿ ಸಿಡಿಪಿಓ ಲೋಕಾಯುಕ್ತ ಬಲೆಗೆ.!

ಅಂಗನವಾಡಿ ಸಹಾಯಕಿ ಗೈರು ಹಾಜರು ಸಕ್ರಮಗೊಳಿಸಲು ಒಂದು ಲಕ್ಷ ರೂಪಾಯಿ ಬೇಡಿಕೆ ನೀಡಿದ ಅಂಗನವಾಡಿ ಕಾರ್ಯಕರ್ತೆ ವನಜಾಕ್ಷಿ ಬಸ್ಸು ನಿಲ್ದಾಣದ …

Leave a Reply

Your email address will not be published. Required fields are marked *