Breaking News

26,27ರಂದು ಹು-ಧಾ ಮಹಾನಗರದಲ್ಲಿ ಗೋಮಾತಾ ನೃತ್ಯ ನಾಟಕ ಪ್ರದರ್ಶನ

ಹುಬ್ಬಳ್ಳಿ: ಶ್ರೀ ಶಕ್ತಿ ಯೋಗಾಶ್ರಮ ಮಂಗಳೂರು ಇವರ ಸಹಯೋಗದಲ್ಲಿ ಯೋಗಾಚಾರ್ಯ ದೇವಬಾಬಾ ಆಶೀರ್ವಾದದೊಂದಿಗೆ ವಿಶ್ವಮಾತಾ ಗೋಮಾತಾ ನಾಟಕ ನೃತ್ಯ ಪ್ರದರ್ಶನವನ್ನು ಇದೇ 26 ರಂದು ನಗರದ ಸವಾಯಿ ಗಂಧರ್ವ ಕಲಾಮಂದಿರದಲ್ಲಿ ಹಾಗೂ 27ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಲಾಗಿದೆ ಎಂದು ಶಕ್ತಿ ಯೋಗಾಶ್ರಮದ ಸಾಧಕರಾದ ಪದ್ಮಾಸಿನಿ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋವು ರಾಷ್ಟ್ರದ ಸಂಪತ್ತು.ನಮ್ಮೆಲ್ಲರ ತಾಯಿ, ವಿಶ್ವಕ್ಕೆ ಮಾತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಗೋವಿನ ಉಳಿವಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಸಂಸ್ಥೆಯು ಸುಮಾರು ವರ್ಷಗಳಿಂದ ದೇಶಿಯ ಹಸು ಉಳಿಸುವ ಚಿಂತನೆಯನ್ನು ಮೈಗೂಡಿಸಿಕೊಳ್ಳುವ ಮೂಲಕ ಕಾರ್ಯಪ್ರಾರಂಭ ಮಾಡಿದ್ದು, ಮೂರು ಹಸುಗಳಿಂದ ಪ್ರಾರಂಭಗೊಂಡು ಇಂದಿಗೆ ಮೂರು ನೂರು ಹಸುಗಳನ್ನು ಸಂಸ್ಥೆಯು ಒಳಗೊಂಡಿದೆ. ದೇಶದ ವಿವಿಧ ತಳಿಗಳನ್ನು ಶಕ್ತಿ ಯೋಗಾಶ್ರಮದಲ್ಲಿ ಪಾಲನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. 26 ರಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಗಾಚಾರ್ಯ ದೇವಬಾಬಾ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿದ್ಧಾರೂಡ ಮಠದ ಟ್ರಸ್ಟಿನ ಅಧ್ಯಕ್ಷರಾದ ಡಿ.ಡಿ.ಮಳಗಿ ಆಗಮಿಸಲಿದ್ದಾರೆ ಎಂದರು.27 ರಂದು ಧಾರವಾಡದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಅಮೃತ ದೇಸಾಯಿ, ಎಸ್.ಆರ್.ರಾಮನಗೌಡರ, ಸ್ವಾಮಿ ವಿಜಯಾನಂದ ಸರಸ್ವತಿ ಆಗಮಿಸಲಿದ್ದಾರೆ ಎಂದು ಅವರು ಹೇಳಿದರು. ವಿಶ್ವಮಾತಾ ಗೋಮಾತಾ ನೃತ್ಯ ನಾಟಕ ರೂಪಕಗಳನ್ನು ಈಗಾಗಲೇ ದೇಶದ 12 ರಾಜ್ಯಗಳಲ್ಲಿ ಪ್ರದರ್ಶನ ನೀಡಿದೆ. ನೃತ್ಯ ನಾಟಕ ರೂಪಕ ದ್ವಿಭಾಷೆಯಲ್ಲಿದ್ದು, ಐವತ್ತಕ್ಕೂ ಹೆಚ್ಚು ಪ್ರದರ್ಶನ ಪೂರ್ಣಗೊಳಿಸಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಜೇಠಾಲಾಲ್ ಜೈನ್, ಬೇರುಲಾಲ್ ಜೈನ್, ದತ್ತಾತ್ರೇಯ ಸೇರಿದಂತೆ ಇತರರು ಇದ್ದರು.

Share News

About admin

Check Also

ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಅರಾಜಕತೆ! ಅಪ್ರಾಪ್ತರ ಕೈಗೆ ಬೈಕ್, ರಸ್ತೆಯಲ್ಲಿ ಜೀವದ ಜೊತೆ ಚೆಲ್ಲಾಟ!

👆News Audio ಹೆಲ್ಮೆಟ್ ಇಲ್ಲ, ನಂಬರ್ ಪ್ಲೇಟ್ ಇಲ್ಲ… ಟ್ರಾಫಿಕ್ ಪೊಲೀಸರ ಕಣ್ಣೆದುರೇ ನಿಯಮಗಳ ಉಲ್ಲಂಘನೆ! ಸಾರ್ವಜನಿಕರ ಜೀವಕ್ಕೆ ಹೊಣೆ …

Leave a Reply

Your email address will not be published. Required fields are marked *