Breaking News

ಕೊಡಗಿನಲ್ಲಿ ಅಮೆರಿಕ ಯುವತಿ ಅತ್ಯಾಚಾರ ಪ್ರಕರಣ: ಹೋಂ ಸ್ಟೇ ಮಾಲೀಕನ ಬಂಧನ ಅಕ್ರಮ; 5 ಲಕ್ಷ ಪರಿಹಾರ ಘೋಷಿಸಿದ ಹೈರ್ಕೋಟ್​!

ಕೊಡಗಿನ ಹೋಂ ಸ್ಟೇಯಲ್ಲಿ ಅಮೆರಿಕ ಮೂಲದ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದ್ದ ಹೋಂ ಸ್ಟೇ ಮಾಲೀಕ ಪಾಳೆಕಂಡ ಪೊನ್ನಪ್ಪ ಅಲಿಯಾಸ್ ವಿಶಾಲ್ ಅವರ ಬಂಧನ ಅಕ್ರಮ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ಜಸ್ಟಿಸ್ ಎಂ. ನಾಗಪ್ರಸನ್ನ ಅವರ ನ್ಯಾಯಪೀಠ ಸರ್ಕಾರ ನಾಲ್ಕು ವಾರಗಳಲ್ಲಿ ₹5 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ. ಮಾಲೀಕ ತನ್ನ ಬಂಧನ ಕಾನೂನುಬಾಹಿರವಾಗಿದ್ದು, ಇದರಿಂದ ತನ್ನ ವ್ಯವಹಾರಕ್ಕೆ ಹಾನಿಯಾಗಿದೆ ಎಂದು ₹15 ಲಕ್ಷ ಪರಿಹಾರ ಹಾಗೂ ಎಫ್‌ಐಆರ್‌ನಿಂದ ತನ್ನ ಹೆಸರನ್ನು ಕೈಬಿಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಬಂಧನ ಅಕ್ರಮ ಎಂದು ಹೇಳಿದರೂ, ತನಿಖೆ ಇನ್ನೂ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಫ್‌ಐಆರ್‌ನಿಂದ ಅವರ ಹೆಸರನ್ನು ಕೈಬಿಡಲು ನಿರಾಕರಿಸಿದೆ. ಪ್ರಕರಣದ ತನಿಖೆ ಮುಂದುವರಿಯಲಿದ್ದು, ಕಾನೂನು ಪ್ರಕ್ರಿಯೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

Share News

About BigTv News

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *