ಮಂಗಳೂರು: ಬಂಟ್ವಾಳದಲ್ಲಿ ಗುರುವಾರ ನಡೆದ ಯುವತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಹಾಗೂ ಪ್ರಚೋದನಾತ್ಮಕ ಪೋಸ್ಟ್ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಾ. ಅರುಣ್ ಕೆ ತಿಳಿಸಿದ್ದಾರೆ. ಯುವತಿಯನ್ನು ಹತ್ಯೆ ಮಾಡಿದ ಆರೋಪಿ ಭಾವಚಿತ್ರಕ್ಕೆ ಕೇಸರಿ ಶಾಲು, ಕುಂಕುಮ ಅಳವಡಿಸಿ ಬಜರಂಗದ ಕಾರ್ಯಕರ್ತರು ಎಂದು ಎಡಿಟ್ ಮಾಡಿ, ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ಬರಹ ಹಾಕಿರುವ ಆರೋಪದ ಮೇಲೆ ಟ್ರೋಲ್ ಮಾಸ್ಟರ್ ಇನ್‌ಸ್ಟಾ ಗ್ರಾಂ ಖಾತೆ, ಯುವ ಬೆಳ್ತಂಗಡಿ ವಾಟ್ಸ್‌ಆಯಪ್ ಗ್ರೂಪ್, ಪದ್ಮರಾಜ್ ಪದ್ಮರಾಜಪರಿ ವಾಟ್ಸ್‌ಆಯಪ್ ಗ್ರೂಪ್, ಯುವ ಕಾಂಗ್ರೆಸ್ ಬೆಳ್ತಂಗಡಿ ವಾಟ್ಸ್‌ಆಯಪ್ ಗ್ರೂಪ್, ಫ್ಯಾಕ್ಟ್ ಆಯಂಡ್ ಜಸ್ಟೀಸ್ ವಾಟ್ಸ್‌ಆಯಪ್ ಗ್ರೂಪ್‌ಗಳ ಬಿಎನ್‌ಎಸ್ ಕಲಂ 196, 353(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶೈಲಜಾ ಅಮರನಾಥ ಎಂಬ ಖಾತೆಯಲ್ಲಿ ಸುಳ್ಳು ಹಾಗೂ ಸಮಾಜದ ಶಾಂತಿ ಕದಡುವ ರೀತಿ ಪೋಸ್ಟ್ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿದೆ. ಚೇತನ್ ಬೆಳ್ಚಡ ಎಂಬ ಫೇಸ್‌ಬುಕ್ ಖಾತೆಯಲ್ಲಿ ಕೊಲೆ ಆರೋಪಿಯ ಚಿತ್ರವನ್ನು ಕಾಂಗ್ರೆಸ್ ಕಾರ್ಯಕರ್ತನೆಂದು ಎಡಿಟ್ ಮಾಡಿ ಹಾಕಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

