ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಚಕ್ರಬಡ್ಡಿ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ₹16.16 ಲಕ್ಷ ಸಾಲಕ್ಕೆ ಈಗಾಗಲೇ ₹36.77 ಲಕ್ಷ ವಸೂಲಿ ಮಾಡಿದ್ದರೂ, ಇನ್ನೂ ₹4.64 ಲಕ್ಷ ಬಡ್ಡಿ ನೀಡುವಂತೆ ಬೆದರಿಕೆ ಹಾಕಿದ ಆರೋಪದ ಮೇಲೆ ಸದಾನಂದ ಭೀಮರಾವ ಹಲಗೆ (47) ಬಂಧಿತರಾಗಿದ್ದಾರೆ. 2022ರಿಂದ 2026ರವರೆಗೆ ಸಾಲ ಪಡೆದು ಅಸಲು ಹಾಗೂ ಬಡ್ಡಿ ಸೇರಿ ಸಂಪೂರ್ಣ ಹಣ ಪಾವತಿಸಿದ್ದರೂ, ಹೆಚ್ಚುವರಿ ಹಣಕ್ಕಾಗಿ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಸಂಕೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪರಾರಿಯಾಗಲು ಯತ್ನಿಸುತ್ತಿದ್ದ ಆರೋಪಿಯನ್ನು ಕಣಗಲಾ ಗ್ರಾಮದ ಬಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಲ್ಲೆಯಲ್ಲಿನ ಅಕ್ರಮ ಚಕ್ರಬಡ್ಡಿ ದಂಧೆ ವಿರುದ್ಧ ಕಠಿಣ ಕ್ರಮ ಮುಂದುವರಿಯಲಿದೆ ಎಂದು ಎಸ್‌ಪಿ ಕೆ. ರಾಮರಾಜನ್ ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

