ಬೆಳಗಾವಿಯಲ್ಲಿ ಆನ್‌ಲೈನ್‌ನಲ್ಲಿ ಬಂದ ತಪ್ಪು ಪಾರ್ಸೆಲ್ ಅನ್ನು ವಾಪಸ್ ಮಾಡಲು ಗೂಗಲ್‌ನಲ್ಲಿ ಕಸ್ಟಮರ್ ಕೇರ್ ಸಂಖ್ಯೆ ಹುಡುಕಿದ ಗ್ರಾಹಕರೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ₹1 ಲಕ್ಷ ಕಳೆದುಕೊಂಡಿದ್ದಾರೆ. ನಕಲಿ ಕಸ್ಟಮರ್ ಕೇರ್ ಹೆಸರಿನಲ್ಲಿ ಸಂಪರ್ಕಿಸಿದ ವಂಚಕರು ರೀಫಂಡ್ ನೆಪದಲ್ಲಿ ಬ್ಯಾಂಕ್ ಖಾತೆ ವಿವರ ಪಡೆದು, ಯುಪಿಐ ಮೂಲಕ ₹98 ಸಾವಿರ ಹಾಗೂ ₹2 ಸಾವಿರ ಸೇರಿ ಒಟ್ಟು ₹1 ಲಕ್ಷ ಹಣ ಎಗರಿಸಿದ್ದಾರೆ. ಪೊಲೀಸರ ಪ್ರಕಾರ, ವಂಚಕರು ನಕಲಿ ವೆಬ್‌ಸೈಟ್, ಮೊಬೈಲ್ ಸಂಖ್ಯೆ ಹಾಗೂ ಸಾಮಾಜಿಕ ಜಾಲತಾಣ ಖಾತೆಗಳನ್ನು ಬಳಸಿಕೊಂಡು ಜನರನ್ನು ಮೋಸಗೊಳಿಸುತ್ತಿದ್ದಾರೆ. ಗೂಗಲ್‌ನಲ್ಲಿ ಸಿಗುವ ಸಂಖ್ಯೆಯನ್ನು ನಂಬದೇ, ಕಂಪನಿಯ ಅಧಿಕೃತ ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿರುವ ಸಂಪರ್ಕ ವಿವರಗಳನ್ನೇ ಬಳಸಬೇಕು. ಒಟಿಪಿ, ಯುಪಿಐ ಪಿನ್ ಅಥವಾ ಬ್ಯಾಂಕ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಸೈಬರ್ ವಂಚನೆ ಅನುಮಾನ ಬಂದ ತಕ್ಷಣ ಬ್ಯಾಂಕ್‌ಗೆ ಮಾಹಿತಿ ನೀಡಿ ಹಾಗೂ ಪೊಲೀಸರಿಗೆ ದೂರು ಸಲ್ಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

