Breaking News

ಹನೂರು ಎನ್‌ಕೌಂಟರ್ ಬೆನ್ನಲ್ಲೇ ಬಯಲಾಯ್ತು ಅಂತರರಾಷ್ಟ್ರೀಯ ಸ್ಮಗ್ಲಿಂಗ್ ಜಾಲ!- ಚೀನಾ, ಮಲೇಷಿಯಾಗೆ ಚಿಪ್ಪುಹಂದಿ ಕಳ್ಳಸಾಗಣೆ

ಚಾಮರಾಜನಗರ: ಹನೂರು ಕಾಡಿನಲ್ಲಿ ನಡೆದ ಬೇಟೆಗಾರರ ಎನ್‌ಕೌಂಟರ್‌ ಪ್ರಕರಣದ ತನಿಖೆಯಲ್ಲಿ ಅಂತರರಾಷ್ಟ್ರೀಯ ಚಿಪ್ಪುಹಂದಿ ಕಳ್ಳಸಾಗಣೆ ಜಾಲ ಬಯಲಾಗಿದೆ. ಚಾಮರಾಜನಗರ ಹಾಗೂ ತಮಿಳುನಾಡಿನ ಗಡಿ ಭಾಗದಲ್ಲಿ ಬೇಟೆಯಾಡಿದ ಚಿಪ್ಪುಹಂದಿಗಳ ಚಿಪ್ಪನ್ನು ಚೀನಾ, ಮಲೇಷಿಯಾಗೆ ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಜಾಲದ ರೂವಾರಿ ಮುನಿಯಾಂಡಿ ಎನ್ನಲಾಗಿದ್ದು, ಆತನೊಂದಿಗೆ ಎಂಎಸ್ಸಿ ಪದವೀಧರ ರಾಬರ್ಟ್‌ ಪಿಂಟೋ ಪೆರಿಯನಾಯಗನ್‌ ಸಂಪರ್ಕ ಹೊಂದಿದ್ದ. ಮುನಿಯಾಂಡಿ ಸೂಚನೆಯಂತೆ ರಾಬರ್ಟ್‌ ಚಿಪ್ಪುಹಂದಿಯ ಅವಶೇಷಗಳನ್ನು ಮನೆಯ ನೀರಿನ ಸಂಪಿನಲ್ಲಿ ಬಚ್ಚಿಟ್ಟು, ಬಳಿಕ ರಹಸ್ಯ ಮಾರ್ಗದ ಮೂಲಕ ವಿದೇಶಕ್ಕೆ ಕಳುಹಿಸುತ್ತಿದ್ದ ಎನ್ನಲಾಗಿದೆ. ರಾಬರ್ಟ್‌ ವಿರುದ್ಧ 2017ರಲ್ಲೇ ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಕರಣ ದಾಖಲಾಗಿತ್ತು. ಚಿಪ್ಪುಹಂದಿ ಚಿಪ್ಪಿಗೆ ಪೂರ್ವ ಏಷ್ಯಾದ ದೇಶಗಳಲ್ಲಿ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಕಳ್ಳಸಾಗಣೆ ನಡೆಯುತ್ತಿತ್ತು ಎನ್ನಲಾಗಿದ್ದು, ಇದೀಗ ಪೊಲೀಸರು ಜಾಲದ ಇತರ ಆರೋಪಿಗಳಿಗಾಗಿ ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *