Breaking News

ಆಟೋ ಚಾಲಕನ ಬಂಧಿಸಿದ್ರಿ, ಚಾಲಕನ ಮೇಲೆ ಹಲ್ಲೆ ನಡೆಸಿದ ಯುವತಿಯರ ಬಂಧನ ಯಾವಾಗ?: HSR ಲೇಔಟ್‌ ಪೊಲೀಸರ ನಡೆಗೆ ನೆಟ್ಟಿಗರ ಆಕ್ರೋಶ

ಬೆಂಗಳೂರು: ಎಚ್‌ಎಸ್‌ಆರ್ ಲೇಔಟ್‌ನ 3ನೇ ಸೆಕ್ಟರ್‌ನಲ್ಲಿ ಇಬ್ಬರು ಯುವತಿಯರು ಹಾಗೂ ಆಟೋ ಚಾಲಕನ ನಡುವೆ ರಸ್ತೆಯಲ್ಲೇ ನಡೆದ ಹೊಡೆದಾಟದ ವಿಡಿಯೋ ವೈರಲ್ ಆಗಿದೆ. ಘಟನೆ ಸಂಬಂಧ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಆಟೋ ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ದರ ವಿಚಾರವಾಗಿ ಜಗಳ ಆರಂಭವಾಗಿದ್ದು, ಯುವತಿಯರು ಮದ್ಯದ ಅಮಲಿನಲ್ಲಿ ತಮ್ಮ ಮೇಲೆ ಮೊದಲು ಹಲ್ಲೆ ನಡೆಸಿದರು ಎಂದು ಆಟೋ ಚಾಲಕ ಆರೋಪಿಸಿದ್ದಾನೆ. ಇತ್ತ ಯುವತಿಯರು ಪೊಲೀಸರಿಗೆ ದೂರು ನೀಡಲು ಒಂದೆರಡು ದಿನಗಳ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಯುವತಿಯರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದ ಪೊಲೀಸರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಎರಡೂ ಕಡೆಯವರ ಹೇಳಿಕೆ ಪಡೆದು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಹಾಗೂ ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

Share News

About BigTv News

Check Also

ಸಾಲದ ವಿಚಾರಕ್ಕೆ ಪತಿ-ಪತ್ನಿ ಕಲಹ : ಮಕ್ಕಳ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ

ಕಲಬುರಗಿ: ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ನಡೆದ ಕಲಹ ದುರಂತಕ್ಕೆ ಕಾರಣವಾಗಿದ್ದು, ತಾಯಿ ತನ್ನ ಇಬ್ಬರು ಪುತ್ರಿಯರೊಂದಿಗೆ ಬಾವಿಗೆ …

Leave a Reply

Your email address will not be published. Required fields are marked *