ಬೆಂಗಳೂರು: ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅವರಿಗೆ ಕಸ್ಟಮ್ಸ್ ಇಲಾಖೆ ₹89 ಕೋಟಿ ದಂಡ ವಿಧಿಸಿದೆ. ಕಸ್ಟಮ್ಸ್ ಅಧಿಕಾರಿ ಸಂದೀಪ್ ಅವರು ಈ ಕುರಿತು ಆದೇಶ ಹೊರಡಿಸಿದ್ದು, ದಂಡದ ಮಾಹಿತಿಯನ್ನು ರನ್ಯಾ ರಾವ್ ಅವರಿಗೆ ತಿಳಿಸಲಾಗಿದೆ. 2024ರ ಮಾರ್ಚ್ 7ರಿಂದ 2025ರ ಫೆಬ್ರವರಿವರೆಗೆ ಸುಮಾರು 113 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿದ ಪ್ರಕರಣದಲ್ಲಿ ರನ್ಯಾ ರಾವ್ ಭಾಗಿಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ದುಬೈನಿಂದ ಚಿನ್ನ ತಂದು ಭಾರತದಲ್ಲಿ ಜಾಲ ವಿಸ್ತರಿಸಿದ್ದ ಆರೋಪ ಅವರ ಮೇಲಿದೆ. ಸಹ ಆರೋಪಿಗಳಾದ ತರುಣ್ ಸೇರಿದಂತೆ ಮೂವರ ಜೊತೆಗೂಡಿ ಈ ಚಿನ್ನದ ವ್ಯವಹಾರ ನಡೆಸಿದ್ದರು ಎನ್ನಲಾಗಿದೆ. ಡಿಆರ್‌ಐ ಅಧಿಕಾರಿಗಳ ತನಿಖೆ ಹಾಗೂ ಬಂಧನದ ಬಳಿಕ ಪ್ರಕರಣದ ಹಲವು ಅಂಶಗಳು ಬಹಿರಂಗವಾಗಿದ್ದು, ಇದೀಗ ಕಸ್ಟಮ್ಸ್ ಇಲಾಖೆ ₹89 ಕೋಟಿ ದಂಡ ವಿಧಿಸಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

