Breaking News

ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪ ಭೀಕರ ಹಿಟ್-ಅಂಡ್-ರನ್: ಕಾರಿನಡಿ 150 ಮೀಟರ್ ಎಳೆದಾಡಲ್ಪಟ್ಟು ಬಾಣಸಿಗ ಸಾ*ವು!

ಬೆಂಗಳೂರು: ಎಲೆಕ್ಟ್ರಾನಿಕ್ಸ್ ಸಿಟಿ ಸಮೀಪ ನಡೆದ ರೋಡ್ ರೇಜ್ ಪ್ರಕರಣದಲ್ಲಿ ಕಾರಿನಡಿ ಸಿಲುಕಿ ಸುಮಾರು 150 ಮೀಟರ್ ಎಳೆದೊಯ್ಯಲ್ಪಟ್ಟ ಯುವ ಬಾಣಸಿಗ ರಂಜಿತ್ ಕುಮಾರ್ ಸಾಹು (25) ಮೃತಪಟ್ಟಿದ್ದಾರೆ. ಅಕ್ಟೋಬರ್ 21ರಂದು ಸ್ನೇಹಿತರನ್ನು ಭೇಟಿಯಾಗಲು ತೆರಳಿದ್ದ ವೇಳೆ ವೇಗವಾಗಿ ಬಂದ ಕಾರನ್ನು ಪ್ರಶ್ನಿಸಿದ್ದಕ್ಕೆ ಕಾರಿನಲ್ಲಿದ್ದವರು ಜಗಳ ತೆಗೆದಿದ್ದಾರೆ. ಬಳಿಕ ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ರಂಜಿತ್ ಕಾರಿನಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಅಜಯ್ ರಬಿದಾಸ್, ಸಜಲ್ ನಮಾಶೂದ್ರ ಹಾಗೂ ಬಿಜೋನ್ ರಾಯ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಕಾರಿನ ಮಾಲೀಕನಿಗಾಗಿ ಶೋಧ ಮುಂದುವರಿದಿದೆ.

Share News

About BigTv News

Check Also

ಬೆಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣ: ಜಲಾಲ್ ನ ಬಂಧನ !

ಬೆಂಗಳೂರು: ಪುಲಿಕೇಶಿನಗರದ ಜರ್ಮಿಯಾ ರಸ್ತೆಯ ಕಟ್ಟಡವೊಂದರಲ್ಲಿ ಅ.20ರಂದು ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರಿನ ಜಲಾಲ್ (25) ಎಂಬ ಯುವಕನನ್ನು …

Leave a Reply

Your email address will not be published. Required fields are marked *