Breaking News

ವೃದ್ಧೆ ಮೇಲೆ ಹಲ್ಲೆ; ಚಿನ್ನಾಭರಣ ದರೋಡೆ ಬಸವನಪುರ ಗ್ರಾಮದಲ್ಲಿ

ಮಂಡ್ಯ: ಮನೆಯ ಮುಂಭಾಗ ಮೊಮ್ಮಗಳೊಂದಿಗೆ ದೂರವಾಣಿಯಲ್ಲಿ ಮಾತನಾಡುತ್ತಿದ್ದ 65 ವರ್ಷದ ವೃದ್ಧೆಯ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿ ಚಿನ್ನದ ತಾಳಿ ಹಾಗೂ ಹಣ ದೋಚಿ ಪರಾರಿಯಾಗಿರುವ ಘಟನೆ ಹಲಗೂರು ಸಮೀಪದ ಬಸವನಪುರ ಗ್ರಾಮದಲ್ಲಿ ನಡೆದಿದೆ. ಜಯಮ್ಮ ಹಲ್ಲೆಗೊಳಗಾದವರು. ನ.8ರಂದು ರಾತ್ರಿ ಮನೆಯ ಹಿಂಭಾಗದಿಂದ ಒಳನುಗ್ಗಿದ ದುಷ್ಕರ್ಮಿಗಳು ಜಯಮ್ಮ ಅವರ ಮುಖ ಮುಚ್ಚಿ ತಲೆಯನ್ನು ಗೋಡೆಗೆ ಅಪ್ಪಳಿಸಿ ಕತ್ತಿನಲ್ಲಿದ್ದ ಚಿನ್ನದ ತಾಳಿ ಕಿತ್ತುಕೊಂಡಿದ್ದಾರೆ. ಬಳಿಕ ಮನೆಯ ಕಪಾಟಿನಲ್ಲಿದ್ದ ಹಣವನ್ನೂ ದೋಚಿದ್ದಾರೆ. ಹಲ್ಲೆಯಿಂದ ವೃದ್ಧೆಯ ನಾಲ್ಕು ಹಲ್ಲುಗಳು ಉದುರಿ ತೀವ್ರ ರಕ್ತಸ್ರಾವವಾಗಿದೆ. ಗ್ರಾಮಸ್ಥರು ಜಯಮ್ಮ ಅವರನ್ನು ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಕಳವಾದ ಆಭರಣದ ಮೌಲ್ಯ ಸುಮಾರು ₹4 ಲಕ್ಷ ಎಂದು ಅಂದಾಜಿಸಲಾಗಿದೆ. ಹಲಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share News

About BigTv News

Check Also

ಕಳತ್ತೂರು: ಗೂಗಲ್ ಪೇ ಗೆ ಹಣ ಜಮಾ ಮಾಡಿದ ಸಂದೇಶ ಕಳುಹಿಸಿ 2.49 ಲ.ರೂ. ವಂಚನೆ

ಉಡುಪಿ: ಗೂಗಲ್ ಪೇಗೆ ಹಣ ಜಮಾ ಆಗಿರುವಂತೆ ನಕಲಿ ಸಂದೇಶ ಕಳುಹಿಸಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ₹2,49,299.73 ಹಣ ವರ್ಗಾಯಿಸಿ …

Leave a Reply

Your email address will not be published. Required fields are marked *