Breaking News

ಹಾವೇರಿಯ ರೈತನ ಹೊಲದಲ್ಲಿ ಲ್ಯಾಂಡ್ ಆಯ್ತು ಸೇನಾ ಹೆಲಿಕಾಪ್ಟರ್

ಹಾವೇರಿ: ತಮಿಳುನಾಡಿನಿಂದ ಬೆಳಗಾವಿಗೆ ತೆರಳುತ್ತಿದ್ದ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ನಲ್ಲಿ ಹಾರಾಟದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕಾಮನಹಳ್ಳಿ ಗ್ರಾಮದ ಬಳಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿರುವ ರೈತರ ಹೊಲದಲ್ಲಿ ZD 4050 ಸಂಖ್ಯೆಯ ಹೆಲಿಕಾಪ್ಟರ್ ಅನ್ನು ಪೈಲಟ್ ಸುರಕ್ಷಿತವಾಗಿ ಇಳಿಸಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ದೀಪಕ್ ಶರ್ಮಾ ಸೇರಿದಂತೆ ಒಟ್ಟು ಆರು ಮಂದಿ ಸಿಬ್ಬಂದಿ ಇದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದು, ಶಿಗ್ಗಾಂವಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹೆಲಿಕಾಪ್ಟರ್ ಸುತ್ತಲೂ ಭದ್ರತೆ ಒದಗಿಸಲಾಗಿದ್ದು, ವಾಯುಪಡೆಯ ತಾಂತ್ರಿಕ ತಂಡಕ್ಕೆ ಮಾಹಿತಿ ನೀಡಲಾಗಿದೆ.

Share News

About BigTv News

Check Also

ಕಳತ್ತೂರು: ಗೂಗಲ್ ಪೇ ಗೆ ಹಣ ಜಮಾ ಮಾಡಿದ ಸಂದೇಶ ಕಳುಹಿಸಿ 2.49 ಲ.ರೂ. ವಂಚನೆ

ಉಡುಪಿ: ಗೂಗಲ್ ಪೇಗೆ ಹಣ ಜಮಾ ಆಗಿರುವಂತೆ ನಕಲಿ ಸಂದೇಶ ಕಳುಹಿಸಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ₹2,49,299.73 ಹಣ ವರ್ಗಾಯಿಸಿ …

Leave a Reply

Your email address will not be published. Required fields are marked *