Breaking News

ಖಾಸಗಿ ಫೋಟೋ ವೈರಲ್ ಬೆದರಿಕೆ; ಬೆಂಗಳೂರಲ್ಲಿ ಮಾಜಿ ಪ್ರಿಯಕರನ ವಿರುದ್ಧ ಜೂನಿಯರ್ ಆರ್ಟಿಸ್ಟ್ ದೂರು!

ಬೆಂಗಳೂರು: ತಾನು ನೀಡಿದ್ದ ₹2 ಲಕ್ಷ ಸಾಲದ ಹಣ ವಾಪಸ್ ಕೇಳಿದ್ದಕ್ಕೆ ಮಾಜಿ ಪ್ರಿಯಕರ ಹಲ್ಲೆ ನಡೆಸಿ, ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕನ್ನಡ ಚಿತ್ರರಂಗದ ಜೂನಿಯರ್ ಆರ್ಟಿಸ್ಟ್ ಆಗಿರುವ ಯುವತಿ ಕಿರುಕುಳಕ್ಕೆ ಒಳಗಾಗಿದ್ದಾರೆ. ನ.4ರಂದು ಯುವತಿ ಆರೋಪಿ ಶರತ್ ಕುಮಾರ್‌ನನ್ನು ಭೇಟಿಯಾಗಿ ಸಾಲದ ಹಣ ಕೇಳಿದ್ದಾರೆ. ಈ ವೇಳೆ ಕೋಪಗೊಂಡ ಆರೋಪಿ ಅಶ್ಲೀಲವಾಗಿ ನಿಂದಿಸಿ, ಕಾರಿನ ಗಾಜು ಒಡೆದು ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೆ, ಖಾಸಗಿ ಫೋಟೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಯುವತಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Share News

About BigTv News

Check Also

ಕಳತ್ತೂರು: ಗೂಗಲ್ ಪೇ ಗೆ ಹಣ ಜಮಾ ಮಾಡಿದ ಸಂದೇಶ ಕಳುಹಿಸಿ 2.49 ಲ.ರೂ. ವಂಚನೆ

ಉಡುಪಿ: ಗೂಗಲ್ ಪೇಗೆ ಹಣ ಜಮಾ ಆಗಿರುವಂತೆ ನಕಲಿ ಸಂದೇಶ ಕಳುಹಿಸಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ₹2,49,299.73 ಹಣ ವರ್ಗಾಯಿಸಿ …

Leave a Reply

Your email address will not be published. Required fields are marked *