Breaking News

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ

ಬೆಳಗಾವಿಯ ವೀರಭದ್ರ ನಗರದಲ್ಲಿದ್ದ ಪ್ಲಂಬಿಂಗ್ ಮತ್ತು ಹಾರ್ಡವೇರ್ ಗೋಡಾವನ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಬೆಂಕಿ ಹೊತ್ತಿದ್ದು ಸುಮಾರು 20ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ಹಾರ್ಡವೇರ್ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ. ಬೆಳಾವಿಯ ವೀರಭದ್ರ ನಗರದ ನಾಗರಾಜ ದೇಸಾಯಿ ಎನ್ನುವವರಿಗೆ ಸೇರಿದ ಗೋಡಾವಣ ಇದಾಗಿದ್ದು, ಸುಮಾರು 20 ಲಕ್ಷಕ್ಕೂ ಅಧಿಕ ವೆಚ್ಚದ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಬೆಳಿಗ್ಗೆ ಸುಮಾರು 9.20ಕ್ಕೆ ಶಾಕ್ ಸರ್ಕ್ಯೂಟನಿಂದ ಬೆಂಕಿ ಕಾಣಿಸಿಕೊಂಡಿದ್ದು ಅಪಾರ ಪ್ರಮಾಣದ ಹಾರ್ಡವೇರ್ ವಸ್ತುಗಳು ಸುಟ್ಟು ಭಸ್ಮವಾಗಿವೆ. ಸುಮಾರು 60ಲಕ್ಷಕ್ಕೂ ಹೆಚ್ಚಿರುವ ಪ್ಲಂಬಿಂಗ್, ಹಾರ್ಡವೇರ್ ವಸ್ತುಗಳಲ್ಲಿ ಅಂದಾಜು 20ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ನಾಶವಾಗಿವೆ ಎಂದು ಹೇಳಲಾಗುತ್ತಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣವೇ ಸ್ಥಳಿಯರ ಸಹಾಯದಿಂದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು ಭಾರಿ ಅನಾಹುತ ತಪ್ಪಿದಂತಾಗಿದೆ. ಈ ಕುರಿತು ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *