Breaking News

ಎಸ್ ಟಿ ಪಿ ಘಟಕಕ್ಕೆ ಸ್ಥಾಪನೆಗೆ ಜಿಲ್ಲಾಡಳಿತ ಬಲವಂತವಾಗಿ ರೈತರ ಭೂಮಿ ಪಡೆದಿದೆ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪ

ಎಸ್ ಟಿ ಪಿ ಘಟಕಕ್ಕೆ
ಸ್ಥಾಪನೆಗೆ ಜಿಲ್ಲಾಡಳಿತ ಬಲವಂತವಾಗಿ ರೈತರ ಭೂಮಿ ಪಡೆದಿದೆ ಎಂದು ಬೆಳಗಾವಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ನೀಡಿದ್ದಾರೆ. ಅಭಿವೃದ್ಧಿಗೆ ಯಾವಾಗಲು ನನ್ನ ವಿರೋಧವಿಲ್ಲ. ಅನೇಕ ವಿಚಾರದಲ್ಲಿ ಗ್ರಾಮೀಣ ಕ್ಷೇತ್ರಕ್ಕೆ ಅನ್ಯಾಯವಾಗಿದೆ. ಸುವರ್ಣ
ಸೌಧಕ್ಕೆ ಈಗಾಗಲೇ ಹಲಗಾ ಗ್ರಾಮಸ್ಥರು ಭೂಮಿ ನೀಡಿದ್ದಾರೆ. ಸುವರ್ಣ
ಸೌಧಕ್ಕೆ ಭೂಮಿ ನೀಡಿದ ರೈತರಿಗೆ ಒಂದು ಎಕರೆಗೆ 13 ಲಕ್ಷ ಪರಿಹಾರ ನೀಡಿದ್ದಾರೆ. STP ಘಟಕಕ್ಕೆ ರೈತರ ಭೂಮಿಗೆ 3 ಲಕ್ಷ ರೂಪಾಯಿ ಬೆಲೆ ಕಟ್ಟಲಾಗಿದೆ. ಸುವರ್ಣ ಸೌಧದ ಸುತ್ತಮುತ್ತ ಒಂದು ಕಿ
ಮೀ ವ್ಯಾಪ್ತಿಯಲ್ಲಿ ಗ್ರೀನ್ ಬೆಲ್ಟ್ ಎಂದು ಘೋಷಣೆ ಮಾಡಲಾಗಿದೆ. ಈ ವರೆಗೆ ಪರಿಹಾರದ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಇದರಿಂದ ಹಲಗಾ ಗ್ರಾಮದ ರೈತರಿಗೆ ಅನ್ಯಾಯ‌ ಆಗಿದೆ. ರೈತರ ಕಷ್ಟದಲ್ಲಿ ನಾನು
ಭಾಗಿಯಾಗೋದು ನನ್ನ ಧರ್ಮ. ಎಕರೆಗೆ 30 ಲಕ್ಷ ಕೊಡಬಹುದು ಎಂದು ಹೇಳಿದ್ದಾರೆ.ಆದರೇ ಈ ಬಗ್ಗೆ ರೈತರಿಗೆ ಜಿಲ್ಲಾಡಳಿತ
ಭರವಸೆ ನೀಡಿಲ್ಲ. ಜಿಲ್ಲಾ ಸಚಿವರ ನೇತೃತ್ವದಲ್ಲಿ ಸಿಎಂ ಬಳಿಗೆ ನಿಯೋಗ ಕರೆದುಕೊಂಡು ಹೋಗಬೇಕು ಜಿಲ್ಲಾ
ಉಸ್ತುವಾರಿ ಸಚಿವರು ರೈತರ ಪರ ನಿಲ್ಲಿಬೇಕು. ವೈಯಕ್ತಿಕ ‌ಪ್ರತಿಷ್ಠೆಯಾಗಿ ತೆಗೆದುಕೊಳ್ಳಲ್ಲ. ಜಿಲ್ಲಾ
ಉಸ್ತುವಾರಿ ಸಚಿವರು ನ್ಯಾಯ ಒದಗಿಸಬೇಕು. ರೈತರ ಮೇಲೆ ದೌರ್ಜನ್ಯ, ಅನ್ಯಾಯ ಆಗಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *