Breaking News

ಹೊಸ ಕೋವಿಡ್ ವೈರಸ್​ ಬೂಸ್ಟರ್‌ ಡೋಸ್​ಗೆ ಅನುಮೋದನೆ…

ವಾಷಿಂಗ್ಟನ್ (ಅಮೆರಿಕ) : ದೇಶದಲ್ಲಿ ಇನ್ನೂ ಮಹಾಮಾರಿ ಕೊರೊನಾ ಆರ್ಭಟ ಕಡಿಮೆಯಾಗಿಲ್ಲ. ಈ ಬೆನ್ನಲ್ಲೇ ಅಮೆರಿಕದ ಆರೋಗ್ಯ ಸಂಸ್ಥೆಯೊಂದು ಹೊಸ ಕೋವಿಡ್ ವೈರಸ್​ ಬೂಸ್ಟರ್‌ ಡೋಸ್​ಗೆ ಅನುಮೋದನೆ ನೀಡಿದೆ. 6 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬರೂ ನವೀಕರಿಸಿದ ಈ COVID-19 ಬೂಸ್ಟರ್ ಅನ್ನು ಪಡೆಯಬಹುದು ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಶಿಫಾರಸು ಮಾಡಿದೆ.

ಸಿಡಿಸಿ ಹಾಗೂ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ತೆಗೆದುಕೊಂಡ ಬೂಸ್ಟರ್‌ ಡೋಸ್​ ನೀಡುವ ನಿರ್ಧಾರವನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಐತಿಹಾಸಿಕ ಮೈಲಿಗಲ್ಲು ಎಂದು ಕರೆದಿದ್ದಾರೆ. ಜೊತೆಗೆ, ನಾವು ಆಡಳಿತವನ್ನು ವಹಿಸಿಕೊಂಡ ಬಳಿಕ ಕೋವಿಡ್ ​- 19 ನಿರ್ವಹಣೆಯಲ್ಲಿ ಪ್ರಮುಖ ಕ್ರಮಗಳನ್ನು ಕೈಗೊಳ್ಳುವ ಮೂಲಕ ಐತಿಹಾಸಿಕ ಪ್ರಗತಿಯನ್ನು ಸಾಧಿಸಿದ್ದೇವೆ. ಆಹಾರ, ಔಷಧ ವಿತರಣೆ ಮತ್ತು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆಯಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಲಾಗಿದೆ. ಇದೀಗ, ಶರತ್ಕಾಲ ಮತ್ತು ಚಳಿಗಾಲದಲ್ಲಿ ಅನಾರೋಗ್ಯದಿಂದ ಬಳಲುವವರ ಸಂಖ್ಯೆ ಕಡಿಮೆ ಮಾಡಲು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ನಿರ್ದೇಶಕರು ಬೂಸ್ಟರ್ ಪಡೆಯಬೇಕು ಎಂದು ಶಿಫಾರಸು ಮಾಡಿದ್ದಾರೆ. ಲಸಿಕೆಯ ಸ್ವತಂತ್ರ ವೈಜ್ಞಾನಿಕ ಪರಿಶೀಲನೆಯ ಬಳಿಕ ಅನುಮೋದನೆ ನೀಡಲಾಗಿದೆ. 6 ತಿಂಗಳು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಕರು ನವೀಕರಿಸಿದ COVID – 19 ಲಸಿಕೆಯನ್ನು ಪಡೆಯಿರಿ” ಎಂದು ಮನವಿ ಮಾಡಿದ್ದಾರೆ.

Share News

About BigTv News

Check Also

ಬ್ಯಾಗ್​ ಕದಿಯಲು ಬಂದವನಿಗೆ ಒಳ್ಳೆಯ ಪಾಠ ಕಲಿಸಿದ ಯುವತಿ.

ಒಬ್ಬ ಹುಡುಗಿ ಇಬ್ಬರು ಕಳ್ಳರೊಂದಿಗೆ ಧೈರ್ಯದಿಂದ ಹೋರಾಡಿದ್ದಲ್ಲದೆ, ತನ್ನ ಧೈರ್ಯದಿಂದ ಅವರನ್ನು ಓಡಿಹೋಗುವಂತೆ ಮಾಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ …

Leave a Reply

Your email address will not be published. Required fields are marked *