ವಿವಾಹ ವಿಚ್ಚೇದನ ಕುರಿತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಎದುರಾಳಿ ಕಡೆಯವರು ವಕೀಲರ ಮೇಲೆ ಹಲ್ಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಅರಸೀಕೆರೆಯಲ್ಲಿ ನಡೆದಿದೆ. ಪುರುಷೋತ್ತಮ ಹಾಗೂ ಬಿಂದುಶ್ರೀ ಎಂಬುವವರ ಪತಿ ಪತ್ನಿ ಡಿವೋರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ನ್ಯಾಯಾಲಯಕ್ಕೆ ಹಾಜರಾಗಿ ಆಚೆ ಬಂದ ಸಂದರ್ಭದಲ್ಲಿ, ಪುರುಷೋತ್ತಮ್ ಎಂಬುವವರ ಮೇಲೆ ಪತ್ನಿ ಬಿಂದುಶ್ರೀ ಸಂಬಂಧಿಕರು ಪುರುಷೋತ್ತಮ್ ರನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ ಅದನ್ನು ತಡೆಯಲು ಹೋದ ಪುರುಷೋತ್ತಮ್ ಪರ ವಕೀಲರಾದ ಪ್ರಸಾದ್ ಮೇಲೂ ಕೂಡ ಹಲ್ಲೆ ನಡೆಸಲಾಗಿದೆ ಎಂದು ವಕೀಲರು ಆರೋಪಿಸಿದ್ದಾರೆ. ಹಲ್ಲೆ ಮಾಡಿದವರು ಅರಸೀಕೆರೆ ತಾಲೂಕು ಬಾಣಾವರ ಎಎಸ್ಐ ಯವರ ಸಂಬಂಧಿಕರು ಎಂದು ತಿಳಿದು ಬಂದಿರುತ್ತದೆ. ತಕ್ಷಣ ಪೊಲೀಸ ರಿಗೆ ದೂರು ನೀಡಿದ್ದು, ಅರಸೀಕೆರೆ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು ಪ್ರಕರಣ ದಾಖಲಾಗಿದೆ.ಪೊಲೀಸರೊಬ್ಬರ ಸಂಬಂಧಿಕರಿಂದ ನ್ಯಾಯಾಲಯದ ಆವರಣದಲ್ಲಿ ಈ ರೀತಿ ದೌರ್ಜನ್ಯ ನಡೆದಿರುವುದನ್ನು ಖಂಡಿಸಿ ಈ ಸಂಬಂಧ, ಅರಸೀಕೆರೆ ವಕೀಲರ ಸಂಘದ ವತಿಯಿಂದ ನಾಳೆ ಶುಕ್ರವಾರ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೆ ಬಾಯ್ ಕಾಟ್ ಮಾಡಿ ಪ್ರತಿಭಟನೆ ನಡೆಸುವುದಾಗಿ, ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





