ರಂಜಾನ್ ಹಬ್ಬದ ಸಂದರ್ಭದಲ್ಲಿ ಮುಸ್ಲಿಮರ ಖಬರ್ ಸ್ಥಾನದಲ್ಲಿನ ಗೋರಿಗಳನ್ನು ಒಡೆದು ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ್ದ ಆರೋಪಿಗಳನ್ನು ಬಂಧಿಸಲು ಪೊಲೀಸರು ವಿಫಲರಾಗಿರುವುದನ್ನು ಖಂಡಿಸಿ ಇಂದು ಮುಸ್ಲಿಂಮರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸರ್ಜಾಪುರದಲ್ಲಿ ನಡೆದಿದೆ. ಸರ್ಜಾಪುರ ಗ್ರಾಮದಲ್ಲಿರುವ ಖಬರ್ ಸ್ಥಾನದಲ್ಲಿದ್ದ ಸುಮಾರು 50 ಗೋರಿಗಳನ್ನು ಒಡೆದು ಹಾಕಿ ಕೋಮುಗಲಭೆ ಸೃಷ್ಟಿಸಲಿ ಯತ್ನಿಸಿದ್ದರು ಈ ಸಂದರ್ಭದಲ್ಲಿ ಮುಸ್ಲಿಮರು ಪ್ರತಿಭಟನೆ ನಡೆಸಿದ್ದು ಅಂದು ಸ್ಥಳಕ್ಕೆ ಆಗಮಿಸಿದ್ದ ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮ್ ನಿವಾಸ್ ಸಫೆಟ್ ಆರೋಪಿಗಳನ್ನು 48 ಗಂಟೆಗಳಲ್ಲಿ ಬಂದಿಸುವುದಾಗಿ ಭರವಸೆ ನೀಡಿದ್ದರು ಆದ್ರೆ ಒಂದು ತಿಂಗಳಾದರೂ ಆರೋಪಿಗಳನ್ನು ಹಿಡಿಯಲು ಸರ್ಜಾಪುರ ಪೊಲೀಸರು ವಿಫಲವಾದ ಹಿನ್ನೆಲೆ ಇಂದು ಮುಸ್ಲಿಂ ಜನರು ನೂರಾರು ಸಂಖ್ಯೆಯಲ್ಲಿ ಸರ್ಜಾಪುರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು . ಇನ್ನು ಪೊಲೀಸರು ಹಾಗೂ ಮುಸ್ಲಿಂ ಸಮಾಜದ ಮುಖಂಡರು ಮಾತುಕತೆ ನಡೆಸಿ ಪೊಲೀಸರು ಇನ್ನೆರಡು ವಾರದಲ್ಲಿ ಆರೋಪಿಗಳನ್ನು ಬಂದಿಸುವುದಾಗಿ ಭರವಸೆ ಕೊಟ್ಟ ನಂತರ ಪ್ರತಿಭಟನೆ ವಾಪಸ್ ಪಡೆದರು. ಇದೆ ಸಂದರ್ಭದಲ್ಲಿ ಮಾತನಾಡಿದ ಮುಸ್ಲಿಂ ಯುವಕ ಕೋಮುಗಲಭೆ ಸೃಷ್ಟಿಸುವ ಸಲುವಾಗಿ ಗೋರಿಗಳನ್ನು ಒಡೆದು ಹಾಕಿದ್ದು ಅಂದು ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದು ಪೊಲೀಸರು 48 ಗಂಟೆಯಲ್ಲಿ ಆರೋಪಿಗಳನ್ನು ಹಿಡಿಯುವುದಾಗಿ ಭರವಸೆ ನೀಡಿದ್ದರು ಆದರೆ ಒಂದು ತಿಂಗಳಾದರೂ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ವಿಫಲಾರಾಗಿದ್ದು ಈ ಹಿನ್ನೆಲೆಯಲ್ಲಿ ಇಂದು ಪ್ರತಿಭಟನೆ ನಡೆಸಿದ್ದೇವೇ ಇದೀಗ ಪೊಲೀಸರು 2 ವಾರ ಸಮಯ ಕೇಳಿದ್ದು ಅಲ್ಲಿವರೆಗೂ ಕಾಯುತ್ತೇವೆ ಅಷ್ಟರಲ್ಲಿ ಆರೋಪಿಗಳನ್ನು ಬಂದಿಸದಿದ್ದಲ್ಲಿ ಬೆಂಗಳೂರಿನಾದ್ಯಂತ ಇರುವ ಮುಸ್ಲಿಮರೆಲ್ಲರು ಸೇರಿ ಸರ್ಜಾಪುರದಲ್ಲಿ ಸೇರಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ಕೊಟ್ಟಿರುವುದಾಗಿ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





