ವೈದ್ಯರ ನಿರ್ಲಕ್ಷ್ಯ ದಿಂದ ನವಜಾತ ಶಿಶು ಸಾವಾನ್ನಪ್ಪಿದ ಘಟನೆ ಆನೇಕಲ್ ತಾಲ್ಲೂಕಿನ
ಹಾರಗದ್ದೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ದಾವಣಗೆರೆಯಿಂದ
ಬಂದು ವಡ್ಡರಪಾಳ್ಯದಲ್ಲಿ ನೆಲೆಸಿದ್ದ ದಂಪತಿಗಳಾದ ಶಶಿಧರ್ ಮತ್ತು ರಂಜಿತಾ ಎಂಬುವರಿಗೆ ಸೇರಿದ ಮಗುವಾಗಿದೆ.
ನಿನ್ನೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ
ಆಸ್ಪತ್ರೆಗೆ ದಾಖಲಿಸಿದ್ದರು.ಆದ್ರೇ ವೈದ್ಯರಿಲ್ಲದೆನೆ ನರ್ಸ್ ಕಡೆಯಿಂದ ಹೆರಿಗೆ
ಮಾಡಿಸಿದ್ದರು. ಮಗು ಉಸಿರಾಟದ ತೊಂದರೆ ಇದೇ ಎಂದು ನರ್ಸ್ ಬೇರೆ ಆಸ್ಪತ್ರೆಗೆ
ಹೋಗುವಂತೆ ಸೂಚಿಸಿದ್ದರು. ಆದ್ರೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುವ ಮೊದಲೇ ಮಗು ಮೃತ ಪಟ್ಟಿದೆ.
ಮಾಹಿತಿ ಪಡೆದ ನರ್ಸ್
ಆಸ್ಪತ್ರೆಯಿಂದ ಪರಾರಿಯಾಗಿದ್ದು, ಸ್ಥಳದಲ್ಲಿ ಕುಟುಂಬದವರು ಆಕ್ರೋಶ
ವ್ಯಕ್ತಪಡಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





