Breaking News

ಸ್ವಿಂಗ್​​ ಕಿಂಗ್​​​​ ಭುವನೇಶ್ವರ್​​​​​​ ಕುಮಾರ್​ ಮುಂದಿನ 2-3 ಪಂದ್ಯಗಳಿಗೆ ಅಲಭ್ಯ

ಪಾಕಿಸ್ತಾನ ವಿರುದ್ಧದ ನಿನ್ನೆಯ ಪಂದ್ಯದಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾದ ಸ್ವಿಂಗ್​​ ಕಿಂಗ್​​​​ ಭುವನೇಶ್ವರ್​​​​​​ ಕುಮಾರ್​ ಮುಂದಿನ 2-3 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.ಹೌದುಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಆಲ್​​​​ರೌಂಡರ್ ಭುವನೇಶ್ವರ್​​​​​​​​​​ ತನ್ನ ಎಡಗಾಲಿನ ಮಂಡಿರಜ್ಜು ನೋವಿಗೆ ತುತ್ತಾಗಿ ಕ್ರೀಡಾಂಗಣದಿಂದ ಹೊರನಡೆದರು. ಈ ವೇಳೆ ಅವರ ಸ್ಥಾನವನ್ನು ಬೌಲರ್​ ಮೊಹಮ್ಮದ್​ ಶಮಿ ತುಂಬಿದರು. 2.4 ಓವರ್​ನಲ್ಲಿ ಬೌಲಿಂಗ್​ ಮಾಡುತ್ತಿದ್ದ ವೇಳೆ ಅವರು ಗಾಯಕ್ಕೆ ತುತ್ತಾದರು. ನಂತರ ಅವರ ಓವರ್​ ಅನ್ನು ವಿಜಯ್​​ ಶಂಕರ್​ ಮುಂದುವರಿಸಿದ್ದರು.ಧವನ್​​ ಹಾಗೂ ಭುವನೇಶ್ವರ್​​​ ತಂಡದಿಂದ ದೂರ ಉಳಿದಿರುವುದರಿಂದ ತಂಡದ ಬಲ ಕೊಂಚ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದ್ದು ಭುವನೇಶ್ವರ್​​ ಅಲಭ್ಯದ ಬಗ್ಗೆ ಮಾತನಾಡಿರುವ ಕೊಹ್ಲಿ, ಭುವೇಶ್ವರ್​​​​ ಒಬ್ಬ ಉತ್ತಮ ಬೌಲರ್​ ಆಗಿದ್ದು, ಅವರು ತಂಡದಿಂದ ಹೊರಗುಳಿದಿರುವುದು ತಂಡಕ್ಕೆ ಹಿನ್ನಡೆಯಾಗಬಹುದು. ಆದರೆ, ಮುಂದಿನ ಅಪ್ಘಾನಿಸ್ತಾನ ಮತ್ತು ವೆಸ್ಟ್​​ ಇಂಡೀಸ್​​​​ ತಂಡಗಳನ್ನು ನಾವು ಎದುರಿಸುವುದರಿಂದ ತಂಡಕ್ಕೆ ಅಷ್ಟೊಂದು ಆಘಾತವಾಗುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share News

About admin

Check Also

IPL 2025 : ಮೊದಲ ಪಂದ್ಯದಲ್ಲಿ ಗೆದ್ದು ಬಿಗಿದ ಆರ್‌ಸಿಬಿ

ಐಪಿಎಲ್ 2025ರ ಭಾಗವಾಗಿ ಆರ್ ಸಿ ಬಿ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 …

Leave a Reply

Your email address will not be published. Required fields are marked *