112 ತುರ್ತು ಸಹಾಯವಾಣಿಗೆ ನರಗುಂದ ಶಹರದ ಕೃಷ್ಣಾ ನಗರದಿಂದ ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಲಾಗಿ ಆಶ್ರಯ ಮನೆಯ ಸಲುವಾಗಿ ನೆರೆಹೊರೆಯವರ ನಡುವೆ ಜಗಳವಾಗಿದ್ದು ಸಮಸ್ಯೆ ಬಗ್ಗೆ ಹರಿಯದ ಕಾರಣ ದೂರುದಾರರಿಗೆ ಠಾಣೆಗೆ ಹೋಗಲು ತಿಳಿಸಲಾಗಿದೆ. ಹೌದು ಆಶ್ರಯ ಮನೆ ಯೋಜನೆ ಹಂಚಿಕೆ ವಿಚಾರದಲ್ಲಿ ಈಗಾಗಲೇ ಅನೇಕ ಗೊಂದಲು ಇದ್ದು ಅದಕ್ಕೆ ಪರಿಹಾರ ನೀಡಬೇಕಾದ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾದ ಅಗತ್ಯತೆ ಇದೆ , ಒಂದೇ ಜಾಗೆಯನ್ನು ಎರಡು ಮೂರು ಕುಟುಂಬಗಳಿಗೆ ಹಂಚಿಕೆ ಅಧಿಕಾರಿಗಳು ಮಾಡಿದ್ದಾರೆ, ಎಂಬ ಆರೋಪಗಳು ನರಗುಂದ ಪಟ್ಟಣ ಹಾಗೂ ಸುರಕೋಡ ಮತ್ತು ಕುರ್ಲಗೇರಿ ಗ್ರಾಮದಲ್ಲಿ ಸಹ ಕೇಳಿಬಂದಿವೆ. ಆದ್ದರಿಂದ ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ಸರಿಯಾದ ಫಲಾನುಭವಿಗಳಿಗೆ ಸರಿಯಾಗಿ ಹಂಚಿಕೆ ಮಾಡಬೇಕು. ಇಲ್ಲದೆ ಇದ್ದರೆ ಮುಂದಿನಗಳಲ್ಲಿ ಈ ರೀತಿಯ ಜಗಳವಾಗುವ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳು ಇವೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





