Breaking News

30 ರಂದು ಕಾರಟಗಿ ಆಸ್ಪತ್ರೆ ನೂತನ ಕಟ್ಟಡುದ್ಘಾಟನೆ ಹಾಗೂ ಪ್ರಾರಂಭೋತ್ಸವ

ಹುಬ್ಬಳ್ಳಿ: ಸುಮಾರು ಒಂದು ದಶಕದಿಂದ ಹುಬ್ಬಳ್ಳಿಯ ‌ರಾಜಧಾನಿ ಕಾಲೋನಿಯ ಕೇಶವಕುಂಜದಲ್ಲಿ‌ ಕಾರ್ಯ ನಿರ್ವಹಿಸುತ್ತಿರುವ ಪ್ರತಿಷ್ಠಿತ ಕಾರಟಗಿ‌ ಆಸ್ಪತ್ರೆಯನ್ನು ನೂತನವಾಗಿ ಗೋಕುಲ ರಸ್ತೆಯ ಆರ್‌. ಎಸ್. ಎಸ್. ಕಚೇರಿ ಬಳಿ ಸ್ಥಳಾಂತರಿಸಲಾಗಿದ್ದು, ಇದೇ ಜೂನ್ 30 ರಂದು ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರಟಗಿ ಆಸ್ಪತ್ರೆಯ ವೈದ್ಯರಾದ ರಾಮಚಂದ್ರ ಕಾರಟಗಿ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಆಸ್ಪತ್ರೆಯನ್ನು ಶ್ರೀ ಸಿದ್ದಾರೂಢ ಮಠದ ಅಂಧ ಮಕ್ಕಳು ಉದ್ಘಾಟಿಸುತ್ತಿರುವದು ವಿಶೇಷವಾಗಿದೆ‌.ಬಡವರ ಬಗ್ಗೆ ವಿಶೇಷ ಕಾಳಜಿ ಇರುವದರಿಂದ ಬಡವರ ಆರೋಗ್ಯದ ದೃಷ್ಟಿಯಿಂದ ವೈದ್ಯ ವೃತ್ತಿಯ ಜೊತೆಗೆ ಬಡವರಿಗೆ, ಸೈನಿಕರಿಗೆ, ವೃದ್ದಾಶ್ರಮ ಹಾಗೂ ಅನಾಥಾಶ್ರಮದ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುತ್ತಾ ಬಂದಿದ್ದೇವೆ. ಜೊತೆಗೆ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದ್ದೇವೆ. ಮುಂದಿನ ದಿನಗಳಲ್ಲೂ ಸಹ ಈ ಕಾರ್ಯವನ್ನು ಮುಂದುವರೆಸುತ್ತಾ ಹೋಗಲಾಗುವುದು ಎಂದರು.ಇಷ್ಟೇ ಅಲ್ಲದೇ ವಾರಕ್ಕೊಂದು ಬಾರಿ ಸಾರ್ವಜನಿಕರಿಗೆ ಉಚಿತ ತಪಾಸಣೆ, ಚಿಕಿತ್ಸೆ, ತಿಂಗಳಿಗೆ ಎರಡು ಬಾರಿ ಉಚಿತ ಶಸ್ತ್ರಚಿಕಿತ್ಸೆ, ರಾಷ್ಟ್ರಾದ್ಯಂತ ಉಚಿತ ಶಿಬಿರ ಆಯೋಜನೆ, ಯೋಧರಿಗೆ ವೈದ್ಯಕೀಯ ನೆರವು ಹಾಗೂ ಅರಿವು, ಕ್ಯಾನ್ಸರ್ ಪೀಡಿತ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಆತ್ಮಸ್ತೈರ್ಯ ಜೊತೆಗೆ ಆಪ್ತ ಸಮಾಲೋಚನೆಯನ್ನು ನಡೆಸಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಡಾ. ವೀಣಾ ಕಾರಟಗಿ, ದಿನೇಶ ಜೈನ, ವಿನಾಯಕ ದೊಂಗಣಿ,ಡಾ. ಬಸವರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share News

About admin

Check Also

Featured Video Play Icon

ತಮ್ಮ ಠಾಣೆಯಲ್ಲಿ ಕೇಸ್ ಇದ್ದರು ರೌಡಿ ಶೀಟರ್ ಗೆ ಹಣ್ಣು ಹಂಪಲದ ಗೌರವ ಕೊಟ್ಟ ಇನ್ಸ್ಪೆಕ್ಟರ್!!!

ಅವಳಿ ನಗರದ ಪೋಟೊ ಕಹಾನಿ….. ಕಮೀಷನರ್ ಸಾಹೇಬ್ರು ತಿಳಿಯಲೇ ಬೇಕಾದ ಈ ಸಣ್ಣ ಸುದ್ದಿಯ ನೈಜ ಸತ್ಯ... ಸಾಮನ್ಯ ಜನರು …

Leave a Reply

Your email address will not be published. Required fields are marked *