Breaking News

ಶಿಕ್ಷಕರ ಕಡ್ಡಾಯ ವರ್ಗಾವಣೆ ವಿರೋಧಿಸಿ ಪ್ರತಿಭಟನೆ.

ಹುಬ್ಬಳ್ಳಿ: ನ್ಯಾಯ ಸಮ್ಮತವಲ್ಲದ ಶಿಕ್ಷಕರ ಕಡ್ಡಾಯ ವರ್ಗಾವಣೆ ವಿರೋಧಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಇಂದು ನಗರದ ತಹಶಿಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಬಳಿಕ ಮಾತನಾಡಿದ ಪ್ರತಿಭಟನಾಕಾರರು.ಹುಬ್ಬಳ್ಳಿ ಶಹರ ವಲಯದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಕಡ್ಡಾಯವಾಗಿ ವರ್ಗಾವಣೆ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ಪತಿ ಪತ್ನಿಯರನ್ನು ಒಂದೆಡೇ ಸೇರಿಸಬೇಕೆಂದು ನಿಯಮ ಹೇಳುತ್ತಿದ್ದು, ಈಗ ವರ್ಗಾವಣೆಯಿಂದ ಅಗಲಿಸುತ್ತಿರುವುದು ಶಿಕ್ಷಕರು ಸಂಕಷ್ಟಕ್ಕೆ ಸಿಲುಕುವಂತ ಪರಿಸ್ಥಿತಿ ‌ನಿರ್ಮಾಣವಾಗುತ್ತಿದೇ ಕೂಡಲೇ ನ್ಯಾಯ ಸಮ್ಮತವಲ್ಲದ ವರ್ಗಾವಣೆ ಕೈ ಬಿಡಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಾಜ್ಯ ಸಿವಿಲ್ ಸೇವೆ ನಿಯಮಾವಳಿ ಪ್ರಕಾರ ಗ್ರಾಮೀಣ ಸೇವೆ ಕಡ್ಡಾಯ ಎಂಬ ಅರ್ಥ ನೀಡುತ್ತಿತ್ತು ಆದರೇ ಇತ್ತಿಚೀಗೆ ಕಡ್ಡಾಯ ಎಂಬ ಅರ್ಥವನ್ನು ತಿರುಚಿದಂತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ನಿಯಮದ ಪ್ರಕಾರ ಸುಮಾರು 10-15 ವರ್ಷಗಳ ಗ್ರಾಮೀಣ ಸೇವೆ ಸಲ್ಲಿಸಿ ಶಹರಕ್ಕೆ ಬಂದಿರುತ್ತೇವೆ ಮತ್ತೇ ವರ್ಗಾವಣೆಯಿಂದ ಶಿಕ್ಷಕರು ಕಷ್ಟ ಅನುಭವಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಅಧ್ಯಕ್ಷರಾದ ಡಿ.ಆರ್.ಬೊಮ್ಮನಹಳ್ಳಿ, ಎಂ.ಎಚ್.ಜಂಗಳಿ, ಪ್ರಲ್ಹಾದ ಗೆಜ್ಜೆ ಸೇರಿದಂತೆ ನೂರಾರು ಶಿಕ್ಷಕರು ಪಾಲ್ಗೊಂಡಿದ್ದರು.

Share News

About admin

Check Also

ನಗರ ಪೊಲೀಸ್ ವಿರುದ್ಧ ಅರ್ಭಟಿಸಿದ ರೌಡಿಶೀಟರ್ ಗಳ ವಿರುದ್ಧ ಕ್ರಮ ಒತ್ತಾಯ!!

ಮನೆಮುರಕರ ಕೂಟದಿಂದ ಸಿಪಿಐ ಹಾಗು ಪೊಲೀಸ್ ಇಲಾಖೆಗೆ ಕಳಂಕ ತರಲು ನಡಿತಾ ಸಂಚು? ಕೋರ್ಟ್ ನಲ್ಲಿ ಕೇಸ್ ಇದ್ದರು ಮಾಧ್ಯಮಗಳ …

Leave a Reply

Your email address will not be published. Required fields are marked *