Breaking News

ರಮೇಶ ಜಾರಕಿಹೊಳಿ ರಾಜೀನಾಮೆಯಲ್ಲಿ ಬಿಜೆಪಿ ಹಸ್ತಕ್ಷೇಪವಿಲ್ಲ.‌

ಬೆಳಗಾವಿ: ರಮೇಶ ಜಾರಕಿಹೊಳಿ ರಾಜೀನಾಮೆಯಲ್ಲಿ ಬಿಜೆಪಿಯ ಇನ್ವಾಲ್ವಮೆಂಟ್ ಎನೂ ಇಲ್ಲ. ಆದರೆ ಅವರು ಬಿಜೆಪಿಗೆ ಬಂದರೆ ನನ್ನ ಸಪೋರ್ಟ ಇದೆ ಎಂದು ಅರೆಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆನಂದ್ ಸಿಂಗ್ ರಾಜೀನಾಮೆ ಕುರಿತು ನಾನು ಮಾಧ್ಯಮಗಳಿಂದ ತಿಳಿದೆ ಜಿಂದಾಲ್ ವಿಷಯಕ್ಕೆ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ ಎಂದರು.ಇನ್ನು ರಮೇಶ ಜಾಕಿಹೊಳಿ ರಾಜೀನಾಮೆ ಕುರಿತು ಮಾತನಾಡಿ, ಅವರು ನನ್ನ ಸಂಪರ್ಕದಲ್ಲಿಲ್ಲ ರಾಜೀನಾಮೆ ಕಾರಣದ ಕುರಿತು ನನಗೆ ಗೊತ್ತಿಲ್ಲ. ವೈಯುಕ್ತಿಕ ಕಾರಣ ಅಂತಾ ಹೇಳಿದ್ದಾರೆ ಎಂದ ಅವರು, ಮುಂಬೈನಲ್ಲಿದ್ದಾರಂತೆ ರಾಜ್ಯಪಾಲರಿಗೆ ಬಂದು ಸ್ವತಃ ರಾಜೀನಾಮೆಯನ್ನು ಸಲ್ಲಿಸುತ್ತಾರಂತೆ ಎಂದರು. ಇನ್ನು ಬಿಜೆಪಿಗೆ ಬಂದರೆ ಅವರಿಗೆ ಫುಲ್ ಸಪೋರ್ಟ್ ನೀಡುತ್ತೇನೆ ಎಂದು ಹೇಳಿದರು.ಸಮ್ಮಿಶ್ರ ಸರ್ಕಾರದ ಶಾಸಕರ ರಾಜೀನಾಮೆಗೆ ಬಿಜೆಪಿಯ ಇನ್ವಾಲ್ವಮೆಂಟ್ ಏನು ಇಲ್ಲ. ಅವರ ಅಸಮಾಧಾನದಿಂದ ಅವರು ರಾಜೀನಾಮೆ ನೀಡಿದ್ದಾರೆ ಅಷ್ಟೆ ಎಂದರು. ಇನ್ನೆರಡು ದಿನಗಳಲ್ಲಿ ಯಾರೆಲ್ಲ ರಾಜೀನಾಮೆ ನೀಡುತ್ತಾರೆ ಎಂದು ತಿಳಿಯುತದೆ ಎಂದು ಅರಂಭಾವಿ ಶಾಸಕ ಬಾಲಚಂದರ್ ಜಾರಕಿಹೋಳಿ ಮಾಧ್ಯಮಗಳಿಗೆ ಹೇಳಿಕೆ ನೀಡಿದರು.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *