ಆನೇಕಲ್: ಗ್ರಾಮ ಪಂಚಾಯತಿ ಸದಸ್ಯರ ಪತಿರಾಯರ ದರ್ಬಾರ್ ನಿಂದ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸೇರಿದಂತೆ ಇಬ್ಬರು ಸದಸ್ಯರನ್ನು ವಜಾಗೊಳಿಸುವ ಮೂಲಕ ಇಂದು ಗ್ರಾಮ ಪಂಚಾಯತಿಯಲ್ಲಿ ನಡೆಯಬೇಕಿದ್ದ ಉಪಾಧ್ಯಕ್ಷರ ಚುನಾವಣಾಗೆ ಮೂವರ ಸದಸ್ಯರನ್ನು ವಜಾಗಿಳಿಸಿ ಆದೇಶ ಹೊರಡಿಸಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮ ಪಂಚಾಯತಿಯಲ್ಲಿ ನಡೆದಿದೆ.ಹೌದು ಕೆಲ ದಿನಗಳ ಹಿಂದೆ ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಕಛೇರಿಗೆ ಬೀಗ ಹಾಕಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಅಧಿಕಾರಿಗಳಿಗೆ ಜೀವ ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಈ ಎಲ್ಲಾ ಆರೋಪಗಳನ್ನು ಧೀರ್ಘ ವಿಚಾರಣೆ ನಡೆಸಿದ್ದ ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಇಲಾಖೆಯ ಅಧೀನ ಕಾರ್ಯದರ್ಶಿ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ ಆರೋಪಗಳು ಸಾಬೀತಾದ ಹಿನ್ನೆಲೆ ಇಂದು ಮುತ್ತಾನಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದ ಮತದಾನದ ಹಕ್ಕನ್ನು ಶುಭ ಶ್ರೀಧರ್, ಗೌರಮ್ಮು ಹರೀಶ್, ಹಾಗು ಜ್ಯೋತಿ ವೆಂಕಟಸ್ವಾಮಿರೆಡ್ಡಿ ಈ ಮೂವರು ಸದಸ್ಯರು ಸದಸ್ಯತ್ವ ಕಳೆದುಕೊಂಡು ಇಂದು 16 ಜನರ ಸದಸ್ಯರ ಉಪಸ್ಥಿತಿಯಲ್ಲಿ ಚುನಾವಣಾ ಅಧಿಕಾರಿಗಳು ಉಪಾಧ್ಯಕ್ಷ ಚುನಾವಣೆ ನಡೆಸಿದ್ದು ಅದರಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ಪಕ್ಷಗಳು ಸಮಬಲ ಮತ ಪಡೆದಿದ್ದರು ನಂತರ ಸದಸ್ಯರುಗಳ ಒಪ್ಪಗೆ ಮೇರೆಗೆ ಲಾಟರಿ ಮೂಲಕ ಬಾಲಕ ಕೈನಿಂದ ಮತ ಹಾಕಿಸುವ ಮೂಲಕ ಮತ್ತೆ ಕಾಂಗ್ರೇಸ್ ಪಕ್ಷದ ಶ್ರೀನಿವಾಸ್ ರೆಡ್ಡಿ ಜಯ ಗಳಿಸಿ ಉಪಾಧ್ಯಕ್ಷರ ಸ್ಥಾನ ಮತ್ತೆ ಕಾಂಗ್ರೆಸ್ನ ಪಾಲಾಗಿದೆ,ಇನ್ನು ಮಾಜಿ ಅಧ್ಯಕ್ಷರು ಹಾಗು ಬಿಜೆಪಿಯವರ ಶಡ್ಯಂತ್ರದಿಂದ ಮೂವರು ಸದಸ್ಯರನ್ನು ವಜಾ ಗೊಳಿಸಿದ್ದಾರೆ ಪಂಚಾಯತಿಯಲ್ಲಿನ ಅಕ್ರಮ ಗಳನ್ನು ಬಯಲಿಗೆ ತರಲು ಹೋಗಿದ್ದಕ್ಕೆ ಸುಳ್ಳು ದೂರುಗಳನ್ನು ದಾಖಲಿಸಿ ವಜಾಗೊಳಿಸಿದ್ದಾರೆ, ನಾವು ಪ್ರತಿಭಟನೆ ನಡೆಸದೆ ಕಾನೂನಿಗೆ ತಲೆಬಾಗಿ ಚುನಾವಣೆಗೆ ಸ್ಪರ್ಧಿಸಿ ಜಯ ಗಳಿಸಿದ್ದೇವೆ ಕೋರ್ಟ್ ನಲ್ಲಿ ವಜಾ ಗೊಳಿಸಿರುವ ಬಗ್ಗೆ ಸ್ಟೇ ಇದ್ದು ಆದಷ್ಟು ಬೇಗ ಈ ಆರೋಪದಿಂದ ನಮ್ಮ ಸದಸ್ಯರು ಹೊರ ಬರುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಮದ್ದೂರಪ್ಪ ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





