ಹುಬ್ಬಳ್ಳಿ: ಅರಣ್ಯ ಭೂಮಿಯಲ್ಲಿ ವಾಸವಿರುವ ಮನೆಗಳನ್ನು ತೆರವುಗೊಳಿಸುವಂತೆ ಹೊರಡಿಸಿರುವ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಧಾರವಾಡ ತಾಲೂಕಿನ ಲಾಳಗಟ್ಟಿ ಹಾಗೂ ದೇವಗಿರಿ ಗ್ರಾಮಸ್ಥರು ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಮನವಿ ಸಲ್ಲಿಸಿದರು.ಗ್ರಾಮದ ಸರ್ವೆ ನಂಬರ್ 97 ಮತ್ತು 82 ರಲ್ಲಿ ಬರುವ ಅರಣ್ಯ ಭೂಮಿಯಲ್ಲಿ ಸುಮಾರು ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸುವಿದ್ದು, ಇಲ್ಲಿಯೇ ಜೀವನ ಸಾಗಿಸುತ್ತಿದ್ದೇವೆ. ಆದ್ರೆ, ಈಗ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿಗಳು ಮನೆಗಳನ್ನು ತೆರವುಗೊಳಿಸುವಂತೆ ಆದೇಶಿಸಿರುವುದು ಖಂಡನೀಯ. ನಮಗೆ ಮೂವತ್ತು ದಿನಗಳ ಗಡುವು ನೀಡಿ ಮನೆಯನ್ನು ತೆರವು ಮಾಡಲು ಆದೇಶಿಸಿದ್ದು, ಈ ಆದೇಶವನ್ನು ಹಿಂಪಡೆಯುವಂತೆ ಕೇಳಿಕೊಂಡರು. ಜೊತೆಗೆ ನಮಗೆ ಜೀವನ ನಡೆಸಲು ಇದ್ದ ಮನೆಗಳನ್ನು ಸ್ವಂತ ಮನೆಯನ್ನಾಗಿ ಮಾಡಿಕೊಡಬೇಕೆಂದು ತಿಳಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





