Breaking News

ಅಜಾನ್ ವಿರುದ್ಧ ಮೊಳಗಿದ ಸುಪ್ರಭಾತ ಅಭಿಯಾನ

ಹುಬ್ಬಳ್ಳಿ : ನಗರದ ಹಳೇ ಹುಬ್ಬಳ್ಳಿ ಗಲಭೆಯಂದು ಕಲ್ಲು ತೂರಾಟಕ್ಕೆ ಒಳಗಾಗಿದ್ದ ದಿಡ್ಡಿ ಆಂಜನೇಯ ದೇವಸ್ಥಾನ ಸೇರಿದಂತೆ ಅವಳಿನಗರದ ವಿವಿಧೆಡೆಯ ದೇವಸ್ಥಾನಗಳಲ್ಲಿ ಇಂದು ಬೆಳಿಗ್ಗೆಯಿಂದಲ್ಲೇ ಶ್ರೀರಾಮ ಸೇನಾ ಹಾಗೂ ಹಿಂದೂ ಸಂಘಟನೆಗಳ ವತಿಯಿಂದ ಅಜಾನ್ ವಿರುದ್ಧ ಸುಪ್ರಭಾತ ಝೇಂಕಾರ ಮೊಳಗಿತು.

ಮಸೀದಿ ಮೇಲಿನ ಅಜಾನ್ ಧ್ವನಿವರ್ಧಕಗಳನ್ನು ತೆರವು ಮಾಡುವಂತೆ ಶ್ರೀರಾಮ ಸೇನಾ ಮೇ ೯ ರವರೆಗೆ ಗಡುವು ನೀಡಿತ್ತು, ಆದರೆ ಇಂದಿಗೆ ಗಡುವು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅಜಾನ್ ವಿರುದ್ಧ ಪ್ರತಿದಿನ ಬೆಳಿಗ್ಗೆ ೫ ಗಂಟೆಯಿಂದಲ್ಲೇ ಸುಪ್ರಭಾತ ಘಂಟಾಘೋಷವಾಗಿ ಮೊಳಗಲಿದ್ದು, ಹುಬ್ಬಳ್ಳಿಯ ಕಮರಿಪೇಟೆ ಹಾಗೂ ವಿವಿಧೆಡೆ ಸೇರಿದಂತೆ ರಾಜ್ಯಾದ್ಯಂತ ಆಂಜನೇಯ ದೇವಸ್ಥಾನದಲ್ಲಿ ಶ್ರೀರಾಮ ಪಠಣ, ಹನುಮಾನ್ ಚಾಲೀಸ್ ಪಠಣ, ಭಜನೆ, ಭಕ್ತಿ ಗೀತೆ, ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿವೆ.

ಅಜಾನ್ ಧ್ವನಿವರ್ಧಕದಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದ್ದು, ಕೋರ್ಟ್ ಆದೇಶದನ್ವಯ ಮಸೀದಿ ಮೇಲಿನ ಧ್ವನಿವರ್ಧಕಗಳನ್ನು ತೆರವು ಮಾಡುವವರೆಗೂ ಅಜಾನ್ ವಿರುದ್ಧ ಸುಪ್ರಭಾತ ನಿರಂತರ ಝೇಂಕರಿಸಲಿದೆ ಎಂದು ಶ್ರೀರಾಮ ಸೇನಾ ಸಂಘಟನೆ ಒತ್ತಾಯಿಸಿತ್ತು.

ದಿನದಿಂದ ದಿನಕ್ಕೆ ಧರ್ಮ ದಂಗಲ್ ನಡೆಯುತ್ತಿದ್ದು, ಹಿಜಾಬ್, ಜಟ್ಕಾ ಕಟ್ ಹಾಗೂ ಹಲಾಲ್ ಕಟ್ ಬಳಿಕ ಇದೀಗ ಮತ್ತೇ ಅಜಾನ್-ಸುಪ್ರಭಾತ ರಾಜ್ಯದಲ್ಲಿ ಸದ್ದು ಮಾಡುತ್ತಿದ್ದು, ರಾಜ್ಯಾದ್ಯಂತ ಧ್ವನಿವರ್ಧಕ ಮೂಲಕ ಸುಪ್ರಭಾತ ಅಭಿಯಾನಕ್ಕೆ ಹಿಂದೂ ಸಂಘಟನೆಗಳು ಕೈಜೋಡಿಸಿವೆ.

Share News

About BigTv News

Check Also

ಮಣಿಪುರದಲ್ಲಿ ಮತ್ತೆ ಹಿಂಸಾಚಾರ: ಅಪಹರಿಸಿ ವ್ಯಕ್ತಿ ಹತ್ಯೆ

ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಉಲ್ಬಣಗೊಂಡಿದ್ದು ಮೈತೇಯಿ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಶಂಕಿತ ಕುಕಿ ಸಮುದಾಯದ ಬಂಡುಕೋರರು ಅಪಹರಿಸಿ ಗುಂಡಿಕ್ಕಿ ಹತ್ಯೆ …

Leave a Reply

Your email address will not be published. Required fields are marked *