ಮೈಸೂರು: ನಗರದ ವಿವಿ ಪುರಂ ಪೊಲೀಸರ ನಿದ್ದೆಗೆಡಿಸಿದ್ದ ಐಷಾರಾಮಿ ಕಾರುಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಕಳ್ಳತನ ಪ್ರಕರಣವನ್ನು ಇದೀಗ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಈ ಸಂಬಂಧ ಬೆಂಗಳೂರು ಮೂಲದ ಕುಖ್ಯಾತ ವೃತ್ತಿಪರ ಖದೀಮನನ್ನು ಬಂಧಿಸಿದ್ದು, ಈತ ಒಬ್ಬನೇ ಕಾರು ಕಳ್ಳತನದ ಜೊತೆಗೆ ಮನೆಗಳ್ಳತನ ಸಹ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಐಷಾರಾಮಿ ಕಾರುಗಳ ಸರಣಿ ಕಳ್ಳತನ ಮಾಡುತ್ತಿದ್ದ ಈತ, ಮೈಸೂರಿನಲ್ಲೇ 2-3 ಐಷರಾಮಿ ಕಾರುಗಳನ್ನು ಕದ್ದು ಬೇರೆಯವರಿಗೆ ಮಾರಾಟ ಮಾಡಿದ್ದ. ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪ್ರಕರಣ ಪೊಲೀಸರ ನಿದ್ದೆಗೆಡಿಸಿತ್ತು. ಈತ ಮೈಸೂರಿನಲ್ಲಿ ಮಾತ್ರವಲ್ಲದೆ ಬೇರೆ ಕಡೆಗಳಲ್ಲಿಯೂ ಕಳ್ಳತನ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ನಗರದ ಯಾದವಗಿರಿ ನಿವಾಸಿಯಾದ ಬಿ.ಸತೀಶ್ ಎಂಬುವವರ ಕಾರನ್ನು ಕಾರು ಜುಲೈ 25 ರಂದು ರಾತ್ರಿ ಆರೋಪಿ ಕಳವು ಮಾಡಿದ್ದ. ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ಸಹ ನೀಡಿದ್ದರು.
ಜಿಪಿಎಸ್ ಕೊಟ್ಟ ಸುಳಿವು ಕಳ್ಳತನವಾದ ಕಾರಿನಲ್ಲಿ ಜಿಪಿಎಸ್ ತಂತ್ರಜ್ಞಾನ ಇದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ಜಿಪಿಎಸ್ ತಂತ್ರಜ್ಞಾನದ ನೆರವು ಪಡೆದು, ಕಾರ್ಯಾಚರಣೆ ಚುರುಕುಗೊಳಿಸಿ ಐಟಿ ವಿಭಾಗದ ಮೂಲಕ ಟ್ರಾಕಿಂಗ್ ಮಾಡಿ ಅಪರಾಧಿಯ ಬೆನ್ನತ್ತಿದರು. ಕಾರಿನಲ್ಲಿ ಜಿಪಿಎಸ್ ಇರುವ ಬಗ್ಗೆ ಕಳ್ಳನಿಗೆ ಮಾಹಿತಿ ಇರಲಿಲ್ಲ. ಖಚಿತ ಮಾಹಿತಿಯನ್ನು ಪಡೆದ ಪೊಲೀಸ್ ತಂಡವು ಬೆಂಗಳೂರಿನ ಒಂದು ಸ್ಥಳದಲ್ಲಿ ಕಾರನ್ನು ಸುತ್ತುವರೆದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





