Breaking News

ರೈತ ವಿಜ್ಞಾನಿ ಮಂಜೇಗೌಡಗೆ ಹೃದಯಸ್ಪರ್ಶಿ ಬಿಳ್ಕೊಡುಗೆ

ಮಂಡ್ಯ: ನವದೆಹಲಿಯಲ್ಲಿ ನಡೆಯುತ್ತಿರುವ ಕೃಷಿ ಸಂಶೋಧನಾ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ ಮಂಡ್ಯ ಪಟ್ಟಣದ ರೈತವಿಜ್ಞಾನಿ ರೋಬೋ ಮಂಜೇಗೌಡ ಅವರಿಗೆ ಇಂದು ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು. ‌ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು ನವದೆಹಲಿಯಲ್ಲಿ ಜುಲೈ17, 18,ಮತ್ತು 19ರಂದು ಹಮ್ಮಿಕೊಂಡಿರುವ ರಾಷ್ಟ್ರೀಯ ಕೃಷಿ ಸಂಶೋಧಕರ ಸಮ್ಮೇಳನದಲ್ಲಿ ಭಾಗವಹಿಸಲು ಕೃಷ್ಣರಾಜಪೇಟೆ ತಾಲ್ಲೂಕಿನಿಂದ ಹೊರಡುತ್ತಿರುವ ರೈತ ವಿಜ್ಞಾನಿ ರೋಬೋ ಮಂಜೇಗೌಡರನ್ನು ಹಿತೈಷಿಗಳು ಮತ್ತು ಪ್ರಗತಿಪರ ಸಂಘ ಸಂಸ್ಥೆಗಳ ಮುಖಂಡರು ಅಭಿನಂದಿಸಿ ಆತ್ಮೀಯವಾಗಿ ಬೀಳ್ಕೊಟ್ಟರು… ಮೂರು ದಿನಗಳ ಕಾಲ ನಡೆಯಲಿರುವ ಕೃಷಿ ಸಂಶೋಧಕರ ಸಮ್ಮೇಳನದಲ್ಲಿ ರೋಬೋ ಮಂಜೇಗೌಡರು ತಾವು ಸಂಶೋಧನೆ ಮಾಡಿರುವ ವಿದ್ಯುತ್ ರಹಿತ ವಾಟರ್ ಪಂಪ್, ಸಸಿಗಳನ್ನು ನೆಡುವ ಯಂತ್ರ ಮತ್ತು ಬೆಳೆಗಳಿಗೆ ನೀರು ನಿರ್ವಹಣೆ ಮಾಡುವ ಯಂತ್ರಗಳ ಪ್ರಾತ್ಯಕ್ಷಿಕೆ ನಡೆಸಿ ಉಪನ್ಯಾಸವನ್ನು ನೀಡಲಿದ್ದಾರೆ…ರೋಬೋ ಮಂಜೇಗೌಡರನ್ನು ಪ್ರಗತಿಪರ ರೈತರಾದ ಕೆ.ಎಸ್.ಸೋಮಶೇಖರ್, ಪ್ರಗತಿಪರ ಚಿಂತಕ ಕತ್ತರಘಟ್ಟ ವಾಸು, ಶಿಕ್ಷಣತಜ್ಞ ಎಸ್.ಸಿ.ಕಿರಣಕುಮಾರ್, ಸಾಮಾಜಿಕ ಚಿಂತಕ ಕೆ.ಆರ್.ನೀಲಕಂಠ, ರೇಷ್ಮೆ ಇಲಾಖೆಯ ಅಧಿಕಾರಿ ದೊರೆಸ್ವಾಮಿ ಮತ್ತಿತರರು ಆತ್ಮೀಯವಾಗಿ ಬೀಳ್ಕೊಟ್ಟರು.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *