ಚಿಕ್ಕೋಡಿ: ಕಲಾಪದಲ್ಲಿ ಭಾಗವಹಿಸದೆ ರಾತ್ರೋರಾತ್ರಿ ನಾಪತ್ತೆಯಾಗಿದ್ದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಭೇಟಿಗೆ ಆಗಮಿಸಿದ ಕಾಂಗ್ರೆಸ್ ಶಾಸಕಿ ಯಶೋಮತಿ ಅವರನ್ನು ಪೋಲೀಸ್ ಅಧಿಕಾರಿಗಳು ಭೇಟಿಗೆ ಅವಕಾಶ ನೀಡದೇ ತಡೆದಿದ್ದಾರೆ.ಈ ವೇಳೆ ಯಶೋಮತಿ ಅವರು ಪೋಲಿಸ್ ಅಧಿಕಾರಿಗಳ ವಿರುದ್ಧ ವಾಗ್ವಾದ ನಡೆಸಿದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಎದೆನೋವು ಎಂಬ ಕಾರಣದಿಂದ ಮುಂಬೈನ ಸೇಂಟ್ ಜಾರ್ಜ್ ಆಸ್ಪತ್ರೆಗೆ ಶಾಸಕ ಶ್ರೀಮಂತ ಪಾಟೀಲ್ ದಾಖಲಾಗಿದ್ದಾರೆ. ಈ ವೇಳೆ ನಮ್ಮ ಎಂ ಎಲ್ ಎ ಗೆ ಭೇಟಿ ಮಾಡಿಸಿ , ಹೇಗಿದ್ದಾರೆಯಂದು ವಿಚಾರಿಸಬೇಕು ಎಂದು ಆಸ್ಪತ್ರೆಗೆ ಬಂದ ಯಶೋಮತಿ ಅವರನ್ನು ಪೋಲಿಸರು ತಡೆದಿದ್ದಾರೆ. ಇದರಿಂದಾಗಿ ಕುಪಿತಗೊಂಡ ಶಾಸಕಿಪೋಲಿಸರ ಜೊತೆ ನಡೆದ ವಾಗ್ವಾದ ನಡೆಸಿದ್ದಾರೆ.ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆದೇಶದ ಮೇರೆಗೆ ಶ್ರೀಮಂತ ಪಾಟೀಲ್ ಭೇಟಿಗೆ ಮಹಾಶಾಸಕಿ ಹೋಗಿದ್ದರು ಎನ್ನಲಾಗುತ್ತಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





