ಮಂಡ್ಯ: ಇಲ್ಲಿನ ನುಡಿಭಾರತಿ ಸಮುದಾಯ ಭವನದಲ್ಲಿ ನಡೆದ ವೃತ್ತಿಯಲ್ಲಿ ಉಪನೋಂದಣಾಧಿಕಾರಿಯಾದರೂ ಪ್ರವೃತ್ತಿಯಲ್ಲಿ ಸಾಹಿತಿಯಾಗಿರುವ ಚಲುವರಾಜ್ ಕೋಲೂರು ಅವರ ‘ಮಾತನಾಡದ ಮೌನ’ ಕವನ ಸಂಕಲನ ಬಿಡುಗಡೆ ಮತ್ತು ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು.
ಈ ಸಮಾರಂಭದಲ್ಲಿ ಪ್ರಜಾವಾಣಿ ವರದಿಗಾರರಾದ ಯೋಗೇಶ್ ಮಾರೇನಹಳ್ಳಿ, ಚಲನಚಿತ್ರ ನಿರ್ದೇಶಕರಾದ ಡಾ.ಕೆ. ಗುರುದತ್, ಪ್ರಾಧ್ಯಾಪಕರಾದ ಡಾ.ವಿ.ಡಿ. ಸುವರ್ಣ, ಶಿಕ್ಷಣೋದ್ಯಮಿ ಅನಂತೇಗೌಡ, ಸಿಓಡಿ ಡಿವೈಎಸ್ಪಿ ಕೆ. ದೇವರಾಜ್, ಜಂಟಿ ಆಯುಕ್ತರಾದ ಸಂತೋಷ್ ಕುಮಾರ್, ರಂಗಕರ್ಮಿ ಡಾ. ಜನಾರ್ಧನ್ ಕೊಂಡ್ಲಿ, ನಿವೃತ್ತ ಉಪನೋಂದಣಾಧಿಕಾರಿ ಪಾಪಣ್ಣ, ಜಿಲ್ಲಾ ಯುವ ಪ್ರಶಸ್ತಿ ಪುರಸ್ಕೃತರಾದ ಎಂ.ಎಲ್. ತುಳದೀಧರ, ಗಾಯಕರಾದ ಕೃಷ್ಣಮೂರ್ತಿ ಅವರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





