ಮೇಷ: ಇಂದು ನೀವು ಅತ್ಯಂತ ಸೂಕ್ಷ್ಮ ಅಥವಾ ಅಪಾಯಕಾರಿ ಸನ್ನಿವೇಶದಲ್ಲಿ ಸಿಲುಕಿಕೊಳ್ಳುತ್ತೀರಿ. ನೀವು ಅಲೆಯ ವಿರುದ್ಧ ಈಜಲು ಬಯಸುತ್ತೀರಿ, ಅದು ಅಷ್ಟೇನೂ ಉಪಯುಕ್ತವಾದುದಲ್ಲ. ಯಾವುದೂ ನಿಮಗೆ ಅನುಕೂಲಕರವಾಗಿರುವಂತೆ ಕಾಣುವುದಿಲ್ಲ. ಒತ್ತಡದಿಂದ ನಿರಾಳಗೊಳ್ಳಲು ನಿಮಗಾಗಿ ಕೊಂಚ ಸಮಯ ತೆಗೆದುಕೊಳ್ಳಿರಿ.ವೃಷಭ :ನೀವು ಸ್ವಯಂ ಮೆಚ್ಚುಗೆ ಭಾವನೆ ಹೊಂದುವುದರಿಂದ ಯಾರ ಕೈಗೂ ಸಿಗುವುದಿಲ್ಲ.ಮಿಥುನ:ನಿಮ್ಮ ಸ್ನೇಹಿತರು ನಿಮ್ಮನ್ನು ನಾಯಕ ಮತ್ತು ಎಲ್ಲರನ್ನೂ ನಿರ್ದೇಶಿಸುವ ವ್ಯಕ್ತಿಯನ್ನಾಗಿ ಕಾಣುತ್ತಾರೆ. ನಿಮಗೆ ನಿಮ್ಮ ಹೃದಯ ಏನನ್ನು ಬಯಸುತ್ತದೋ ಅದನ್ನು ಪಡೆಯುವಲ್ಲಿ ನೀವು ಗಮನ ನೀಡಿರಬಹುದು. ಕೆಲ ಕಾಲದಿಂದ ಉತ್ತರ ದೊರೆಯದೆ ಉಳಿದ ಅನುಮಾನಗಳಿಗೆ ಸೃಜನಶೀಲ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ನೀವು ಯಶಸ್ವಿಯಾಗಬಹುದು.ಕರ್ಕಾಟಕ:ದೇವರ ಆಶೀರ್ವಾದ ನಿಮಗೆ ಯಶಸ್ಸು ಗಳಿಸಲು ನೆರವಾಗುತ್ತದೆ. ಇದು ವಿದ್ಯಾರ್ಥಿಗಳು ಇತರರಿಗಿಂತ ಉತ್ತಮ ಸಾಧನೆ ಮಾಡಲು ಸುವರ್ಣ ಸಮಯ. ಕಲ್ಪನಾಶಕ್ತಿ ಕಾಡಿನ ಬೆಂಕಿಯಂತೆ ನಿಮ್ಮಲ್ಲಿ ಉರಿಯುತ್ತಿದೆ ಮತ್ತು ಇಂದು ಎಲ್ಲವೂ ನಿಮ್ಮ ದಾರಿಯಲ್ಲಿ ಮುನ್ನಡೆಯುವಂತೆ ಕಾಣುತ್ತಿವೆ.ಸಿಂಹ:ನೀವು ಇಂದು ನಿಮ್ಮ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಕೆಲಸದಲ್ಲಿ ಕಳೆದರೆ, ನಿಮಗೆ ಆಶ್ಚರ್ಯಗೊಳಿಸಲು ಸಕಾರಾತ್ಮಕ ಫಲಿತಾಂಶಗಳು ಕಾಯುತ್ತಿವೆ. ಕಚೇರಿಯಲ್ಲಿ ಸಂಬಂಧಗಳನ್ನು ಕಾಪಾಡಿಕೊಳ್ಳಲು ಪ್ರಬುದ್ಧತೆ ಮತ್ತು ಅರ್ಥ ಮಾಡಿಕೊಳ್ಳುವುದು ಅಗತ್ಯ. ಈ ಪವಿತ್ರ ದಿನದಂದು ವ್ಯಾಪಾರವು ಮಹತ್ತರ ಪುರಸ್ಕಾರಗಳು ಹಾಗೂ ಲಾಭಗಳನ್ನು ತಂದುಕೊಡಲಿದೆ.ಕನ್ಯಾ:ಇಲ್ಲಿಯವರೆಗೂ ನೀವು ತಡೆಹಿಡಿದಿದ್ದ ಭಾವನೆಗಳು ಇಂದು ಹೊರಗಡೆ ನುಗ್ಗಲು ದಾರಿ ಕಂಡುಕೊಳ್ಳಬಹುದು. ನೀವು ಕೈಗೆ ಸಿಗುವ ವಸ್ತುಗಳ ಕುರಿತು ಭಾವನೆಗಳನ್ನು ಬೆಳೆಸಿಕೊಂಡು ಅವುಗಳೊಂದಿಗೆ ಬಾಂಧವ್ಯ ಬೆಳೆಸಿಕೊಳ್ಳಬಹುದು. ನೀವಿರುವ ಪರಿಸರ ನಿಮ್ಮ ಇಷ್ಟಕ್ಕೆ ಅನುಗುಣವಾಗಿಲ್ಲದೇ ಇರುವುದರಿಂದ ವಿಶ್ರಾಂತಿರಾಹಿತ್ಯದ ಭಾವನೆ ಹೊಂದಬಹುದು.ತುಲಾ:ಲೈಟ್ಸ್, ಕ್ಯಾಮರಾ, ಆ್ಯಕ್ಷನ್! ಈ ಅತ್ಯಂತ ಉತ್ತೇಜನದ ಮತ್ತು ಸ್ಫೂರ್ತಿಯುತ ದಿನದಲ್ಲಿ ಲೈಮ್ ಲೈಟ್ ನಿಮ್ಮ ಕಡೆ ತಿರುಗಿರುವುದರಿಂದ ಜನರ ಮೆಚ್ಚುಗೆಯನ್ನು ಗಳಿಸಲು ಸಜ್ಜಾಗಿರಿ. ಇಂದು ಆವಿಷ್ಕಾರಕ ಯೋಜನೆಗಳು, ಅದರಲ್ಲಿಯೂ ತಮಗೆ ತಾವೇ ಬಾಸ್ ಬಯಸುವವರು ಮತ್ತು ಸ್ವಯಂ ಹಣಕಾಸು ಹೂಡಿಕೆ ಆಲೋಚನೆಗಳನ್ನು ಹೊಂದಿರುವವರಿಗೆ ಉತ್ತೇಜಕಾರಕ ದಿನವಾಗಿದೆ.ವೃಶ್ಚಿಕ:ಮತ್ತಷ್ಟು ಆಳವಾಗಿ ಹುಡುಕಾಟದಲ್ಲಿ ತೊಡಗಿರಿ. ಕರ್ಮದ ಪರಿಣಾಮವಿರುತ್ತದೆ, ಆದರೆ, ಫಲಿತಾಂಶ ಕುರಿತು ಹೆಚ್ಚು ಆಲೋಚಿಸಬೇಡಿ. ಜಂಟಿ ಸಹಯೋಗಗಳ ಕುರಿತು ಇಂದು ಕಾದು ನೋಡುವ ವಿಧಾನ ಅನುಸರಿಸಿ.ಧನು:ಸಮಸ್ಯೆಗಳು ಇಂದು ನಿಮ್ಮನ್ನು ಮೂಲೆಗೆ ತಳ್ಳುತ್ತವೆ. ಆದರೆ ಎಷ್ಟು ಸಾಧ್ಯವೋ ಅಷ್ಟು ಬೇಗನೆ ಅವುಗಳನ್ನು ಪರಿಹರಿಸಿಕೊಳ್ಳಲು ಪ್ರಯತ್ನಿಸಿ. ಅಂತಿಮ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ತಡವಾಗುವುದನ್ನು ನಿರೀಕ್ಷಿಸಿ. ದಿನ ಅಂತ್ಯವಾದಂತೆ ಉಪಯುಕ್ತ ಫಲಿತಾಂಶಗಳನ್ನು ನಿರೀಕ್ಷಿಸಿ.ಮಕರ:ಎಲ್ಲ ದಿನಗಳೂ ಒಂದೇ ರೀತಿಯಲ್ಲಿರುವುದಿಲ್ಲ. ಮತ್ತು, ಇಂದು ಅತ್ಯಂತ ಗೊಂದಲದ ಭಾವನೆಗೆ ಒಳಗಾದ ದಿನವಾಗಿದೆ. ನೀವು ಋಣಾತ್ಮಕ ಭಾವನೆಗಳಿಂದ ಹೊರಬರಲು ಸಾಧ್ಯವಿಲ್ಲ, ನಿಮ್ಮ ಕಠಿಣ ಪರಿಶ್ರಮ ಫಲ ನೀಡುತ್ತದೆ ಮತ್ತು ಭವಿಷ್ಯಕ್ಕೆ ಬಲವಾದ ತಳಹದಿ ನಿರ್ಮಿಸುತ್ತದೆ.ಕುಂಭ:ಸಮಾಜದ ವಿವಿಧ ವಲಯಗಳ ಜನರ ಭೇಟಿ, ಅವರೊಂದಿಗೆ ಒಳ್ಳೆಯ ಮಾತುಕತೆ ಮತ್ತು ನಿಮ್ಮ ಜ್ಞಾನದ ವಿಸ್ತರಣೆ-ಇವು ಇಂದು ನಿಮಗಾಗಿ ಇರುವ ಪ್ರಮುಖಾಂಶಗಳು. ನಿಮ್ಮ ಶಕ್ತಿಗಳನ್ನು ನೀವು ಸಂಪೂರ್ಣವಾಗಿ ಬಳಸಿಕೊಳ್ಳುತ್ತೀರಿ, ಆದರೆ ಇದು ನಿಮ್ಮನ್ನು ಸುಸ್ತಾಗಿಸಲೂಬಹುದು.ಮೀನ:ವ್ಯಾಪಾರದಲ್ಲಿ ನೀವು ಎದುರಿಸುತ್ತಿರುವ ಅಡೆತಡೆಗಳಿಂದ ತಳಮಳಗೊಳ್ಳುತ್ತಿದ್ದೀರಾ? ನಿಮ್ಮ ಸಮಸ್ಯೆಯ ಮೂಲವನ್ನು ಎದುರಿಸಿ ಮತ್ತು ನಿಮ್ಮ ಹೊಣೆಗಾರಿಕೆಗಳ ಕುರಿತು ತಾಳ್ಮೆ ಮತ್ತು ನಂಬಿಕೆ ಇಟ್ಟುಕೊಳ್ಳಿ. ನಿಮ್ಮ ದಾರಿಯಲ್ಲಿ ಒಳ್ಳೆಯ ವಿಷಯಗಳು ಹಾಗೂ ಒಳ್ಳೆಯ ಸಮಯ ಬರುತ್ತದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





