Breaking News

ಪೂರ್ಣಚಂದ್ರತೇಜಸ್ವಿ ಅವರಿಂದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸತ್ಯನಾರಾಯಣಗೌಡ ಅವರಿಗೆ ಅಧಿಕೃತ ಆಹ್ವಾನ

ಮಂಡ್ಯ: ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರಗತಿಪರ ಚಿಂತಕ, ಮೈಸೂರಿನ ಜ್ಞಾನಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ ಅವರಿಗೆ ಕಸಾಪ ಅಧ್ಯಕ್ಷ ಪೂರ್ಣಚಂದ್ರತೇಜಸ್ವಿ ಅವರಿಂದ ಅಧಿಕೃತ ಆಹ್ವಾನ ನೀಡಲಾಯಿತು.ಸತ್ಯನಾರಾಯಣಗೌಡ ಅವರ ಮನೆಗೆ ತೆರಳಿದ ಕೆ.ಆರ್.ಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪೂರ್ಣಚಂದ್ರ ತೇಜಸ್ವಿ ಅವರ ನೇತೃತ್ವದಲ್ಲಿ ಫಲತಾಂಬೂಲ ನೀಡಿ, ಮೈಸೂರು ಪೇಟ ತೊಡಿಸಿ ಆಹ್ವಾನ ನೀಡಲಾಯಿತು. ಅಕ್ಕಿಹೆಬ್ಬಾಳು ಗ್ರಾಮದ ಬಿ.ಜಯಶ್ರೀ ರಂಗಮಂದಿರದ ಆವರಣದಲ್ಲಿ ಜುಲೈ.31ರಂದು ನಡೆಯುತ್ತಿರುವ ತಾಲ್ಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಿಗೆ ಅಧಿಕೃತ ಆಹ್ವಾನ ನೀಡಲಾಯಿತು.ಉಧ್ಯಮಿ ಅಕ್ಕಿಹೆಬ್ಬಾಳು ಎ.ಆರ್.ರಘು, ಮಂದಗೆರೆ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಜೈನಹಳ್ಳಿ ರಾಜೇಗೌಡ, ಕಿಕ್ಕೇರಿ ಹೋಬಳಿ ಕಸಾಪ ಅಧ್ಯಕ್ಷ ಎಲ್.ಎಸ್.ಧರ್ಮಪ್ಪ, ತಾಲ್ಲೂಕು ಕಸಾಪ ಕಾರ್ಯಾಧ್ಯಕ್ಷ ಎಸ್.ನಾಗರಾಜೇಗೌಡ, ಕಿಕ್ಕೇರಿ ಹೋಬಳಿ ಕಸಾಪ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಮಂಜುನಾಥ, ಜೆ.ಜಿ. ರಾಜೇಗೌಡ, ಸಂತೋಷ್ ಉಪಸ್ಥಿತರಿದ್ದರು.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *