ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ವತಿಯಿಂದ 91ನೇ ಸಂಸ್ಥಾಪಕರ ದಿನಾಚರಣೆ ಸಮಾರಂಭವನ್ನು ಆ.1ರಂದು ಮಧ್ಯಾಹ್ನ ಸಂಸ್ಥೆಯ ಚಂದ್ರವದನ ದೇಸಾಯಿ ಸಭಾಗೃಹದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ವಿ.ಪಿ.ಲಿಂಗನಗೌಡರ ತಿಳಿಸಿದರು. ನಗರದಲ್ಲಿಂದು ಕರ್ನಾಟಕ ವಾಣಿಜ್ಯೋಧ್ಯಮ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿ ಯಲ್ಲಿಮಾತನಾಡಿದ ಅವರು, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯು ಸಾರ್ವಜನಿಕರ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದ್ದು, ಯುವಕರಿಗೆ, ವ್ಯಾಪಾರಸ್ಥರಿಗೆ, ವಿದ್ಯಾರ್ಥಿಗಳಿಗೆ ಪೂರಕವಾಗಿ ಸಂಸ್ಥೆಯು ಶ್ರಮಿಸುತ್ತ ಬಂದಿದೆ ಎಂದರು. ವಿಮಾನಯಾನದಲ್ಲಿ ಮಹತ್ವಪೂರ್ಣವಾದ ಯೋಜನೆಗಳ ಅನುಷ್ಟಾನದಿಂದ ಸಂಸ್ಥೆಯು ರಾಜ್ಯದ ಹಲವಾರು ನಗರಗಳಿಗೆ ವಿಮಾನಯಾನದ ಸೇವೆಯನ್ನು ಒದಗಿಸುವ ಮೂಲಕ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ರಜತ್ ಮಹೋತ್ಸವ, ಸುವರ್ಣ ಮಹೋತ್ಸವ ಹಾಗೂ ಅಮೃತ ಮಹೋತ್ಸವ ಆಚರಿಸಿದೆ ಎಂದು ಅವರು ಹೇಳಿದರು.ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಸಾರ್ವಜನಿಕರ ಸೇವೆಗೆ ವೇದಿಕೆ ಕಲ್ಪಿಸಿರುವ ಸಂಸ್ಥಾಪಕರ ದಿನಾಚರಣೆ ಆಚರಿಸಲು ಆ.1ರಂದು ನಿಶ್ಚಯಿಸಲಾಗಿದೆ ಎಂದು ಅವರು ಹೇಳಿದರು. ಅಂದು ನಡೆಯಲಿರುವ ಕಾರ್ಯಕ್ರಮದ ಸಾನಿಧ್ಯವನ್ನು ಹಾವೇರಿ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮಿಗಳು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಜಯ ಗ್ರೂಫ್ ವ್ಯವಸ್ಥಾಪಕ ನಿರ್ದೇಶಕರಾದ ಸಂಜಯ ಗೋಡಾವತ್ ಆಗಮಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ವಿ.ಪಿ.ಲಿಂಗನಗೌಡರ ವಹಿಸಲಿದ್ದಾರೆ ಎಂದರು. ಅಲ್ಲದೇ ಕಾರ್ಯಕ್ರಮದಲ್ಲಿ ತಿಲಕ ವಿಕಮಶಿ, ಓಂ ಪ್ರಕಾಶ ಜೈನ, ವಿವೇಕ ನಾಯಕ, ಪ್ರಕಾಶ ದಾಸನೂರ, ಸತೀಶ ಮಾಂಜ್ರೇಕರ ಸಾಧಕರಿಗೆ ವಾಣಿಜ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.ಅಲ್ಲದೇ ಯುವ ಉದ್ಯಮಿಗಳಾದ ಪ್ರಸಾದ ಪಾಟೀಲ, ನಿರಂಜನ ಕಾರ್ಗಿಯವರಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಮಹೇಂದ್ರ ಲದ್ದಡ, ಅಶೋಕ ತೋಳನವರ,ಜಿ.ಕೆ.ಆದಪ್ಪನವರ, ವಿನಯ ಜವಳಿ, ಅಶೋಕ ಗಡಾದ, ಸುಭಾಸ ಬಾಗಲಕೋಟ, ಅಚ್ಚುತ ಲಿಮೆ ಸೇರಿದಂತೆ ಇತರರು ಇದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





