ಮಂಡ್ಯ: ಜಿಲ್ಲೆಯಲ್ಲಿಂದು ತೋಟದಮ್ಮನವರ ಹಬ್ಬದ ಸಂಭ್ರಮ ಮನೆ ಮಾಡಿತು.ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ಹೊರವಲಯದ ತೋಟದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ನಗರದ ನಿವಾಸಿಗಳು ಮತ್ತು ಮಹಿಳೆಯರು ಪಟ್ಟಣದ ಮುಖ್ಯ ರಸ್ತೆಯಲ್ಲಿ ತೊಂಬಿಟ್ಟಿನಾರತಿಯ ಮಡೆಯನ್ನು ತಲೆಯ ಮೇಲೆ ಹೊತ್ತು ಮೆರವಣಿಗೆ ನಡೆಸಿದರೆ, ಮಕ್ಕಳು ಮತ್ತು ಯುವಜನರು ತಮಟೆಯ ಸದ್ದಿಗೆ ಭರ್ಜರಿ ಸ್ಟೆಪ್ ಹಾಕಿ ನೃತ್ಯಮಾಡಿ ಸಂಭ್ರಮಿಸಿದರು…ಪುರಸಭೆಯ ಸದಸ್ಯ ಡಿ.ಪ್ರೇಮಕುಮಾರ್, ಮುಖಂಡರಾದ ಬಾಲಕೃಷ್ಣ, ಉಮೇಶ್ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು… ತೋಟದಮ್ಮನವರ ಹಬ್ಬದಲ್ಲಿ ಭಕ್ತಿಯ ಪರಾಕಾಷ್ಠೆಯು ಮುಗಿಲು ಮುಟ್ಟಿತ್ತು…
bigtvnews | Hubli Dharwad News | Kannada News | Karnataka News Hubli News | News In Hubli | Local news





