Breaking News

ಗಾಧ್ರಿಪಾಲನಾಯಕನ ಬೆಟ್ಟದಲ್ಲಿ ಮಳೆಗಾಗಿ ಪ್ರಾರ್ಥನೆ.

ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟನೂರು ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ, ಬರದ ಛಾಯೆ ಆವರಿಸಿರುವುದರಿಂದ, ಹಿರೇಗುಂಟನೂರಿನ ಸುತ್ತಮುತ್ತಲಿನ ಹತ್ತಕ್ಕೂ ಹೆಚ್ಚು ಗ್ರಾಮಗಳ ಜನರು ಬುಧವಾರ, ತಮ್ಮ ತಮ್ಮ ಗ್ರಾಮಗಳ ಗ್ರಾಮ ದೇವರುಗಳನ್ನು, ಮೊದಲು ಕಡಲೆಗುದ್ದು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ, ಎಲ್ಲಾ ಊರಿನ ದೇವರುಗಳನ್ನು, ದೇವಾಲಯದ ಆವರಣದಲ್ಲಿ ಪೂಜೆ ಸಲ್ಲಿಸಿ ನಂತರ, ಗಾಧ್ರಿಪಾಲನಾಯಕನ ಬೆಟ್ಟಕ್ಕೆ ಕರೆತಂದು, ಅಲ್ಲಿ ಎಲ್ಲಾ ದೇವರುಗಳಿಗೆ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದರು.ಕಳೆದ ಎರಡೂ ಮೂರು ವರ್ಷಗಳಿಂದ ಈ ಭಾಗದಲ್ಲಿ ಮಳೆ ಬೀಳುವ ಪ್ರಮಾಣ ಕಡಿಮೆಯಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಕೊಳವೆ ಬಾವಿಗಳಲ್ಲಿ ನೀರು ಬತ್ತುತ್ತಿದ್ದು, ಕುಡಿಯುವ ನೀರಿಗು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ, ಈ ವರ್ಷದಲ್ಲೂ ಮಳೆ ಸಂಪೂರ್ಣ ಕೈಕೊಟ್ಟಿದ್ದು, ಮುಂಗಾರು ಮಳೆಗಳು ಮುಗಿಯುತ್ತ ಬಂದರು, ಈ ಭಾಗದ ಜಮೀನುಗಳಲ್ಲಿ ಎಲ್ಲಿಯೂ ಬಿತ್ತನೆಯಾಗಿಲ್ಲ, ಇದರ ಜೊತೆಗೆ ಜಾನುವಾರುಗಳಿಗೆ ಮೇವಿನ ಕೊರತೆ ಹೆಚ್ಚಾಗಿದ್ದು, ರೈತರಲ್ಲಿ ಈಗ ಇವರು ಮೇವಿನ ಲಭ್ಯತೆ ಇನ್ನೂ ಕೇವಲ ಹದಿನೈದು, ಇಪ್ಪತ್ತು ದಿನಗಳಲ್ಲಿ ಸಂಪೂರ್ಣ ಮೇವು ಖಾಲಿಯಾಗಲಿದ್ದು, ಮುಂದೆನೂ ಎನ್ನುವ ಚಿಂತೆ ಹೆಚ್ಚಾಗಿದೆ.ನಿತ್ಯ ಜೀವನಕ್ಕೆ ಹೈನುಗಾರಿಕೆಯನ್ನು ಉಪ ಕಸುಭಾಗಿ, ನಂಬಿಕೊಂಡು ಬದುಕುತ್ತಿರುವ ಅನೇಕ ಕುಟುಂಬಗಳಿಗೆ, ಮಳೆ ಗಾಲದಲ್ಲೆ ಮಳೆ ಕೈಕೊಟ್ಟಿರುವುದರಿಂದ, ಮೇವಿನ ಲಭ್ಯತೆ ಇಲ್ಲದೆ, ಕುಟುಂಬ ನಿರ್ವಹಣೆಗೆ ಸಹಾಯವಾಗಿರುವ ಹಸುಗಳನ್ನು, ಅನಿವಾರ್ಯವಾಗಿ ಮಾರಾಟ ಮಾಡಲೆ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಇನ್ನೂ ಆರೇಳು ವರ್ಷಗಳ ಕಾಲ ತಮ್ಮ ಜಮೀನುಗಳಲ್ಲಿ ಲಕ್ಷಾಂತರ ಸಾಲ ಮಾಡಿ ಬೆಳೆಸಿರುವ, ತೋಟಗಾರಿಕೆಯಾ ಬೆಳೆಗಳಾದ, ಅಡಕೆ, ತೆಂಗು, ಮಾವು, ದಾಳಿಂಬೆ, ಸೇರಿದಂತೆ ಅನೇಕ ಬೆಳೆಗಳು ಬಾಡುತ್ತಿದ್ದು,ಇವುಗಳಿಗೆ ಬೋರ್ ವೆಲ್, ಟ್ಯಾಂಕರ್, ಸೇರಿದಂತೆ ಹಲವು ಮೂಲಗಳಿಂದ ಈ ಬೆಳೆಗಳಿಗೆ ನೀರು ಹಾಯಿಸಲು ಈಗಾಗಲೇ, ರೈತರು ಮಾಡಿರುವ ಲಕ್ಷಾಂತರ ಸಾಲ ತೀರಿಸಲಾಗದೆ, ರೈತರ ಆತ್ಮಹತ್ಯೆಗೆ ಕಾರಣವಾಗುತ್ತಿದೆ.ಇದರ ಜೊತೆಗೆ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿರುವುದರಿಂದ, ಬೇಸತ್ತ ಈ ಭಾಗದ ಗ್ರಾಮಸ್ಥರು, ದೇವರುಗಳ ಮೊರೆಯೋಗಿದ್ದು, ಮುಂದಿನ ದಿನಗಳಲ್ಲಾದರು ಸಮೃದ್ಧಿ ಮಳೆ ನಡೆಸಿಕೊಡುವಂತೆ, ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲುಸಿದರು, ಇದೆ ವೇಳೆ ಹಿರೇಗುಂಟನೂರಿನ ಸುತ್ತಮುತ್ತಲಿನ ಊರುಗಳಾದ, ಭೀಮಸಮುದ್ರ, ಬೊಮ್ಮನಹಳ್ಳಿ, ಕಡಲೆಗುದ್ದು, ಗೊಲ್ಲರ ಹಟ್ಟಿ, ಹುಣಸೆಕಟ್ಟೆ, ಸಿದ್ದವ್ವನ ಹಳ್ಳಿ, ಚಿಕ್ಕಲಾಘಟ್ಟ, ಕೋಣನೂರು, ಸೇರಿದಂತೆ ಹಲವಾರು ಗ್ರಾಮಗಳ ಸಾವಿರಾರು ಗ್ರಾಮಸ್ಥರು ಈ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದರು.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *