ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಕಳೆದ ಹಲವು ದಿನಗಳಿಂದ ವರುಣನ ಆರ್ಭಟ ಹೆಚ್ಚಾಗಿದ್ದು, ಕೃಷ್ಣ ನದಿ ನೀರಿನ ಪ್ರಮಾಣವೂ ಸಹ ನಿರೀಕ್ಷಿತ ಮಟ್ಟಕ್ಕಿಂತ ಹೆಚ್ಚಾಗಿರುವ ಪರಿಣಾಮ ಜನರ ಜೀವನ ನಿರ್ವಹಣೆ ದುಸ್ತರವಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕೋಡಿ ಎಸಿ ರವಿಂದ್ರ ಕರಲಿಂಗನವರ ಅವರ ನೇತೃತ್ವದಲ್ಲಿ ಇಂಗಳಿ ಗ್ರಾಮದ ನಡುಗಡ್ಡೆಗೆ ಅಧಿಕಾರಿಗಳ ತಂಡ ಮನೆ ಮನೆಗೆ ತೆರಳಿ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಮನವಿ ಮಾಡಿಕೊಂಡರು. ತಹಸಿಲ್ದಾರ್, ಹೆಚ್ವುವರಿಯಾಗಿ ಎರಡು ಬೋಟ್ಗಗಲೊಂದಿಗೆ ಬಂದಿರುವ ಎಸ್ ಡಿ ಆರ್ ಎಫ್ ತಂಡಗಳು ನಡುಗಡ್ಡಗೆ ಭೇಟಿ ನೀಡಿದರು.ಮುಂಜಾಗ್ರತಾ ಕ್ರಮವಾಗಿ ೨೦ ಎಸ್ ಡಿ ಆರ್ ಎಫ್ ಸಿಬ್ಬಂದಿಯನ್ನು ಜಿಲ್ಲಾಡಳಿತ ನೇಮಕ ಮಾಡಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





