Breaking News

ಕೊನೆಗೂ ಯಶಸ್ವಿಯಾದ ರೈತರ ಪ್ರತಿಭಟನೆ ನಾಳೆಯಿಂದಲೇ ಸಾಹುಕಾರ್ ಚನ್ನಯ್ಯ ಮುಖ್ಯನಾಲೆಯಲ್ಲಿ 1200ಕ್ಯೂಸೆಕ್ಸ್ ನೀರನ್ನು ಹರಿಸಲು ಘೋಷಣೆ

ಮಂಡ್ಯ: ಮಂಡ್ಯದ ಎಡದಂಡೆ ನಾಲೆ ಗೊರೂರ್ ಹೇಮಾವತಿ ನೀರನ್ನು ಕೆರೆ ಕಟ್ಟೆಗಳನ್ನು ತುಂಬಿಸಲು ಅನುಕೂಲವಾಗುವಂತೆ ನಾಳೆಯಿಂದಲೇ ಗೊರೂರು ಜಲಾಶಯದ ಎಡದಂಡೆನಾಲೆಯಾದ ಸಾಹುಕಾರ್ ಚನ್ನಯ್ಯ ಮುಖ್ಯನಾಲೆಯಲ್ಲಿ 1200ಕ್ಯೂಸೆಕ್ಸ್ ನೀರನ್ನು ಹರಿಸುವುದಾಗಿ ಹೇಮಾವತಿ ಜಲಾಶಯ ಯೋಜನೆಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಮೋಹನರಾಜ ಅರಸ್ ಘೊಷಣೆ ಮಾಡಿದರು.ರೈತರ ಹೋರಾಟಕ್ಕೆ ಮಣಿದ ಸರ್ಕಾರ ಹೇಮಾವತಿ ನದಿ ಕಾಲುವೆಗಳಾದ ಹೇಮಗಿರಿನಾಲೆ ಮತ್ತು ಮಂದಗೆರೆ ಎಡದಂಡೆ ಹಾಗೂ ಬಲದಂಡೆ ನಾಲೆಗಳಿಗೂ ನೀರು ಹರಿಸಲು ಕ್ರಮಕೈಗೊಳ್ಳುವುದಾಗಿ ಪ್ರತಿಭಟನಾನಿರತ ರೈತರಿಗೆ ಎಸ್ ಇ ಮೋಹನರಾಜ ಅರಸ್ ಅವರು ಭರವಸೆ ನೀಡಿದರು.ಮಂಡ್ಯ ಜಿಲ್ಲೆ ಮಂಡ್ಯ ಕೃಷ್ಣರಾಜಪೇಟೆ ಪಟ್ಟಣದ ನಂ.3 ಹೇಮಾವತಿ ಜಲಾಶಯ ಯೋಜನೆಯ ಕಾರ್ಯಪಾಲಕ ಎಂಜಿನಿಯರ್ ಕಛೇರಿಯ ಮುಂದೆ ಇಂದು ಬೆಳಿಗ್ಗೆಯಿಂದ ರೈತರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಚಳವಳಿಗೆ ಬೆದರಿದ ಸರ್ಕಾರ ಹೇಮಾವತಿ ನದಿಯ ಗೊರೂರು ಜಲಾಶಯದ ಎಡದಂಡೆ ನಾಲೆಗೆ ನೀರು ಹರಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮೌಖಿಕ ಆದೇಶ ನೀಡಿದ್ದು ಜಲಸಂಪನ್ಮೂಲ ಕಾರ್ಯದರ್ಶಿಗಳು ನೀರು ಹರಿಸಿ ಕೆರೆ ಕಟ್ಟೆಗಳನ್ನು ತುಂಬಿಸಲು ಆದೇಶ ನೀಡಿದ್ದಾರೆ. ನಾಳೆಯಿಂದಲೇ ಎಡದ‌ಂಡೆ ನಾಲೆ ಮತ್ತು ಹೇಮಾವತಿ ನದಿಅಣೆಕಟ್ಟೆಯ ನಾಲೆಗಳಿಗೆ ನೀರು ಹರಿಸುವುದಾಗಿ ಸೂಪರಿಂಟೆಂಡೆಂಟ್ ಎಂಜಿನಿಯರ್ ಮೋಹನರಾಜ ಅರಸ್ ಒಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ ರೈತರು ಚಳವಳಿಯನ್ನು ವಾಪಸ್ ಪಡೆದರು. ಕಾರ್ಯಪಾಲಕ ಎಂಜಿನಿಯರ್ ಬಾಲಕೃಷ್ಣ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದ ಮಾಜಿಶಾಸಕ ಬಿ.ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರವೀಂದ್ರಬಾಬು, ಕಿಕ್ಕೇರಿಸುರೇಶ್, ಬೇಲದಕೆರೆ ಪಾಪೇಗೌಡ, ರೈತಮುಖಂಡರಾದ ಮುದುಗೆರೆ ರಾಜೇಗೌಡ, ಕೆ.ಆರ್.ಜಯರಾಂ, ಮುದ್ದುಕುಮಾರ್, ಲಕ್ಷ್ಮೀಪುರ ಜಗಧೀಶ್, ಪಿ.ಬಿ. ಮಂಚನಹಳ್ಳಿ ನಾಗಣ್ಣಗೌಡ, ಕಾರಿಗನಹಳ್ಳಿಕುಮಾರ್ ತರಾಟೆಗೆ ತೆಗೆದುಕೊಂಡರಲ್ಲದೇ ಎಸ್ ಇ ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೂ ಚಳವಳಿ ವಾಪಸ್ ಪಡೆಯುವುದಿಲ್ಲ ಎಂದು ಅನಿರ್ಧಿಷ್ಠಾವಧಿ ಪ್ರತಿಭಟನೆ ಆರಂಭಿಸಿದ್ದರು.ಅಂತಿಮವಾಗಿ ಎಸ್.ಇ ಮೋಹನರಾಜ ಅರಸ್ಸ್ಥಳಕ್ಕೆ ಆಗಮಿಸಿ ಪ್ರತಿಭಟನಾನಿರತರೊಂದಿಗೆ ಮಾತನಾಡಿ ನೀರು ಹರಿದುವ ಭರವಸೆ ನೀಡಿ ಚಳವಳಿಯನ್ನು ವಾಪಸ್ ಮಾಡಿಸುವಲ್ಲಿ ಯಶಸ್ವಿಯಾದರು.ತಾಲ್ಲೂಕು ರೈತಸಂಘದ ಅಧ್ಯಕ್ಷ ಮರುವನಹಳ್ಳಿ ಶಂಕರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *