Breaking News

ಮುಂದಿನ ದಿನದಲ್ಲಿ ರಾಜ್ಯದಲ್ಲಿ ಉಪಚುನಾವಣೆ ಎದುರಿಸಬೇಕಾಗುತ್ತೆ: ಅರವಿಂದ್ ಲಿಂಬಾವಳಿ.

ಕುಂದಗೋಳ, ಚಿಂಚೋಳಿ ಬಿಜೆಪಿಗೆ ಮತ್ತು ರಾಜ್ಯಕ್ಕೆ ಪ್ರಮುಖವಾದ ಚುನಾವಣೆ ಎಂದು ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ‌ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ಸಮ್ಮಿಶ್ರ ಸರ್ಕಾರ ಆರಂಭದಿಂದ ಒಂದಿಲ್ಲೊಂದು ಗೊಂದಲದಲ್ಲಿದೆ. ಎರಡು ಪಕ್ಷದಲ್ಲಿ ಹೊಂದಾಣಿಕೆ ಇಲ್ಲದೇ ಇರೋದಿಂದ್ರ ಸರ್ಕಾರ ನಡೆಸುವ ನೀತಿಗೆ ಜನ ಬೇಸತ್ತಿದ್ದಾರೆ. ಜನ ಮಾತ್ರವಲ್ಲ ‌ಎರಡೂ ಪಕ್ಷದ ಶಾಸಕರೂ ಬೇಸತ್ತಿದ್ದಾರೆ. ಕುಪೇಂದ್ರ ರೆಡ್ಡಿ ಮಾತುಗಳೇ ಇದಕ್ಕೆ ತಾಜಾ ಉದಾಹರಣೆ ಎಂದು ಅರವಿಂದ್ ಲಿಂಬಾವಳಿ ಆರೋಪಿಸಿದರು.104 ಸ್ಥಾನ ಗೆದ್ದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ. ಬರುವ ದಿನಗಳಲ್ಲಿ ರಾಜ್ಯದಲ್ಲಿ ಉಪಚುನಾವಣೆಗಳನ್ನು ಎದುರಿಸಬೇಕಾಗುತ್ತದೆ. ರಾಜೀನಾಮೆಯಿಂದ ತೆರವಾಗುವ ಸ್ಥಾನಗಳಿಗೆ ಉಪಚುನಾವಣೆ ನಡೆಸುವ ಪರಿಸ್ಥಿತಿ ಬರುತ್ತದೆ. ರಾಜೀನಾಮೆ ಕೊಡುವವರ ಸಂಖ್ಯೆ 104ರ ಕೆಳಗೆ ಬಂದಾಗ, ನಾವು ಸರ್ಕಾರ ರಚಿಸಲು ಮುಂದಾಗುತ್ತೇವೆ. ಈ ಉಪಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿ, 106ಕ್ಕೆ ಏರಿಸಿ ಕೊಡಿ ಅಂತಾ ಜನರಲ್ಲಿ ಕೇಳುತ್ತಿದ್ದೇವೆ. ಈಗಾಗಾಲೇ ಇಬ್ಬರು ಪಕ್ಷೇತರು ಬೆಂಬಲ ಕೊಟ್ಟಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಬೇಸತ್ತು ಕೆಲವರು ರಾಜೀನಾಮೆ ಕೊಡ್ತಾರೆ. ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಅರವಿಂದ್ ಲಿಂಬಾವಳಿ ಹೇಳಿದರು. ಉಪಚುನಾವಣೆಯಲ್ಲಿ ಕಾಂಗ್ರೆಸ್ ವಾಮ ಮಾರ್ಗ ಬಳಸುತ್ತಿದೆ. ಸಚಿವ ಡಿಕೆ ಶಿವಕುಮಾರ್ ನಮ್ಮ ಕಾರ್ಯಕರ್ತರಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ನಮ್ಮ ಪಕ್ಷದ ಮೂರನೇ ನಾಲ್ಕನೇ ಹಂತದ ಮುಖಂಡರನ್ನು ಸಂಪರ್ಕಿಸಿ ಹಣದ ಆಮಿಷ ತೋರಿಸುತ್ತಿದ್ದಾರೆ ಎಂದು ಅರವಿಂದ್ ಲಿಂಬಾವಳಿ ಆರೋಪಿಸಿದರು.ಬೇನಾಮಿ‌ ಆಸ್ತಿಯ‌ ಕೇಸ್ ಎದುರಿಸುತ್ತಿರುವ ಡಿಕೆ ಶಿವಕುಮಾರ್, ಬಿಎಸ್‌ವೈ ಮೇಲೆ ಆರೋಪ ಮಾಡುತ್ತಿದ್ದಾರೆ. ಗುತ್ತಿಗೆದಾರರಿಂದ ಹಣ ಕೇಳುತ್ತಿದ್ದಾರೆ ಎಂದು ಆರೋಪ‌ ಮಾಡುತ್ತಿದ್ದಾರೆ. ಆದರೆ ನಾವು ಪಾರದರ್ಶಕವಾಗಿ ಚುನಾವಣೆ ಮಾಡುತ್ತಿದ್ದೇವೆ. ಡಿಕೆ ಶಿವಕುಮಾರ್ ಮೇಲೆ‌ ಐಟಿ ದಾಳಿಗಳು ಆದರೂ ನಡತೆ ಬದಲಿಸಿಕೊಳ್ಳುತ್ತಿಲ್ಲ. ಕೆ.ಸಿ ವೇಣುಗೋಪಾಲ ‌ಬಿಜೆಪಿಯ 20 ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿದಾರೆ ಅಂತಾ ಹೇಳಿದ್ದಾರೆ. 20 ಜನ ಬಂದರೂ ಸರ್ಕಾರ ರಚನೆ ಆಗೋದಿಲ್ಲ ಎಂದರು.

Share News

About admin

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ …

Leave a Reply

Your email address will not be published. Required fields are marked *