ಧಾರವಾಡ: ಕಳೆದ ಹಲವಾರು ದಿನಗಳಿಂದ ಉತ್ತರ ಕರ್ನಾಟಕ ಮಹಾಮಳೆಗೆ ತತ್ತರಿಸಿ ಹೋಗಿದೆ. ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಹಾಮಳೆಯ ಹಾವಳಿಯಿಂದಾಗಿ ಧಾರವಾಡ ಜಿಲ್ಲೆಯ ಹಲವು ಗ್ರಾಮಸ್ಥರೂ ಸಾಕಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಜಿಲ್ಲೆಯಲ್ಲಿ ಹಲವು ಗ್ರಾಮಗಳಿಗೆ ನೀರು ನುಗ್ಗಿದೆ. ಬೆಣ್ಣೆ ಹಳ್ಳ, ಉಣಕಲ್ ಕೆರೆ, ಸೇರಿದಂತೆ ಹಲವು ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು ವರುಣನ ಆರ್ಭಟಕ್ಕೆ ಹಲವಾರು ಕುಟುಂಬಗಳು ನಿರಾಶ್ರಿತರನ್ನಾಗಿಸಿದೆ.ಈ ಹಿನ್ನೆಲೆಯಲ್ಲಿ ನಗರದ ಜೆ.ಜಿ ಕಾಲೇಜ್ ಆಫ್ ಕಾಮರ್ಸ್ ನ 2008-09.ಸಾಲಿನ ವಿದ್ಯಾರ್ಥಿಗಳ ವತಿಯಿಂದ ಸಂತ್ರಸ್ತರಿಗಾಗಿ ಹಲವು ಉಪಯುಕ್ತ ಸಾಮಗ್ರಿಗಳನ್ನು ಸಂಗ್ರಹಿಸಿ ನಿಡುತ್ತಿದ್ದಾರೆ. ಬೆಂಕಿ ಪೊಟ್ಟಣ, ಬೆಡ್ ಶೀಟ್, ಬ್ಲಾಂಕೆಟ್, ಕ್ಯಾಂಡಲ್ಸ, ಹಾಲಿನ ಟೆಟ್ರಾ ಪ್ಯಾಕ್ ಗಳು, ಕುಡಿಯುವ ನೀರಿನ ಬಾಟಲ್ಸ, ಅಕ್ಕಿ, ಬೆಳೆ, ಸೊಪು, ಪೇಸ್ಟ್, ಬ್ರೆಡ್, ಬಿಸ್ಕತ್ತು, ಕಾಫ್ ಸಿರಪ್, ಪ್ಯಾರಾಸಿಟಮಾಲ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪುರೈಸಿದ್ದಾರೆ.ಇನ್ನು ಈ ಕಾರ್ಯದಲ್ಲಿ ನಗರದ ಜೆ.ಜಿ ಕಾಲೇಜ್ ಆಫ್ ಕಾಮರ್ಸ್ ನ 2008-09. ಸಾಲಿನ ವಿದ್ಯಾರ್ಥಿಗಳ ವತಿಯಿಂದ ವಿರೇಶ್ ಕವಿಶೆಟ್ಟಿ, ಪ್ರದಿಪ್ ಕಂಚಿಕೆರಿ, ನಾಗರಾಜ್ ಗುಡಿ, ಜಾವೆದ್ ತೊರಗಲ್, ಸಂತೊಷ್ ಕುದರಿ, ಹೀತೆಷ್ ಖೊನಾ, ಸಾಗರ್ ಪಂಡಿತ್, ಮಹೇಶ್ ಕಲ್ಶಾಣ್ ಶೆಟ್ಟರ್, ಅಂಬರಿಶ್, ಸೆರೆದಂತೆ ಕಾಲೆಜಿನ ಹಲವು ಹಳೆ ವಿದ್ಯಾರ್ಥಿಗಳು ಕೈ ಜೋಡಿಸಿದ್ದಾರೆ. ಅಲ್ಲದೇ. ನಗರದ ಬೆಸ್ಟ್ ಬೇಕರಿಯ ಪಾಂಡು ಅವರು ಸಂತ್ರಸ್ತರಿಗಾಗಿ 1 ಸಾವಿರ ಬನ್ ಗಳನ್ನು ನಿಡಿ ಮಾನವೀಯತೆ ಮೆರೆದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





