Breaking News

ಹೀಗೇ ಅನ್ಯಾಯವಾದ್ರೇ ಪ್ರತ್ಯೇಕ ರಾಜ್ಯದ ಕಹಳೆ- ಪಾಪು ಗುಡುಗು

ಉತ್ತರ ಕರ್ನಾಟಕಕ್ಕೆ ಇದೇ ರೀತಿ ತಾರತಮ್ಯ ಮುಂದುವರೆ ಪ್ರತ್ಯೇಕ ರಾಜ್ಯದ ಕೂಗಿಗೆ ಬೆಂಬಲ ನೀಡಬೇಕಾಗುತ್ತದೆ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಎಚ್ಚರಿಸಿದಾರೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆಗಿರುವ ಡಾ. ಪಾಪು ಇವತ್ತು ಸುದ್ದಿಗೋಷ್ಠಿ ನಡೆಸಿ, ಉತ್ತರಕರನಾಟಕಕ್ಕೆ ಆಗ್ತಿರೋ ಅನ್ಯಾಯದ ವಿರುದ್ಧ ಗುಡುಗಿದಾರೆ. ಪ್ರತ್ಯೇಕ ರಾಜ್ಯದ ಬೇಡಿಕೆ ಕುರಿತು ಬಳ್ಳಾರಿ, ದಾವಣಗೆರೆ, ಕಲಬುರ್ಗಿಯಲದಲಿ ಸಭೆ ಮಾಡಬೇಕಿದೆ. ಅಷ್ಟೇ ಅಲ್ಲ, ಪ್ರತ್ಯೇಕ ಕರ್ನಾಟಕದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತೇವೆ ಅನ್ನೋದನ್ನ ಡಾ. ಪಾಟೀಲ ಪುಟ್ಟಪ್ಪ ತುಂಬಾ ಖಡಕಾಗಿಯೇ ಹೇಳಿದಾರೆ. ಮೈತ್ರಿ ಸರ್ಕಾರ ಕೇವಲ ಮೈಸೂರ ಭಾಗದವರಿಗಾಗೇ ರಚನೆಯಾದಂತಾಗಿದೆ. ಇದೇ ರೀತಿಯ ಧೋರಣೆ ಮುಂದುವರೆದರೆ, ನಮ್ಮ ಹೋರಾಟ ನಿರಂತರವಾಗಿ ಮುಂದುವರೆಯುತ್ತದೆ ಎಂದರು. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರು ನಾಳೆ ಹುಬ್ಬಳ್ಳಿಗೆ ಬರುತ್ತಿದ್ದು, ಅವರಿಗೆ ಈ ಕುರಿತು ವಿವರಣೆ ನೀಡುತ್ತೇವೆ. ಆಂಧ್ರ, ತೆಲಂಗಾಣ ಎರಡು ರಾಜ್ಯ ಆಗಿದೆ. ಇನ್ನೊಂದೆಡೆ ಸಮಿಶ್ರ ಸರ್ಕಾರದ ಬಜೆಟ್ ನಲ್ಲಿ ನೀಡಿರುವ ಒಂದರಿಂದ ಇಂಗ್ಲೀಷ್ ಕಲಿಕೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಒಂದನೇ ತರಗತಿಯಿಂದ ಇಂಗ್ಲೀಷ್ ಕಲಿಕೆ ಬೇಡ. ಆರಂಭದಿಂದಲೇ ಇಂಗ್ಲೀಷ್ ಬೇಕು ಎಂಬುದನ್ನು ನಾವು ಒಪ್ಪುವುದಿಲ್ಲ. ಆಸ್ಸಾಂ, ಪಂಜಾಬ್, ಕೇರಳ ಹೀಗೆ ಹಲವು ರಾಜ್ಯಗಳಲ್ಲಿ ಇಂಗ್ಲೀಷ್ ವ್ಯಾಮೋಹ ಅಂಟಿಕೊಂಡಿದೆ. ಈ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಇದರ ನೇತೃತ್ವವಹಿಸಿ, ಎಲ್ಲ ದೇಸಿ ಭಾಷೆ ನಾಯಕರನ್ನು ಕರೆಯಿಸಿ ಮಾತುಕತೆ ನಡೆಸಲಿ. ಬೇಕಾದರೆ ಪ್ರಧಾನಿ ಅವರನ್ನೂ ಸಭೆಗೆ ಕರೆಸಲಿ. ಅಲ್ಲದೆ ಐದನೇ ತರಗತಿ ನಂತರ ಬೇಕಾದರೆ ಇಂಗ್ಲೀಷ್ ಕಲಿಸಲಿ. ಕನ್ನಡ ಶಾಲೆ ವಿಲೀನ‌ ಮಾಡುವುದಕ್ಕೆ ಒಪ್ಪುವುದಿಲ್ಲ, ಕನ್ನಡ ಭಾಷೆ ಉಳಿವಿಗಾಗಿ ಆಂದೋಲನ ಮುಂದುವರೆಯುತ್ತದೆ ಎಂದರು.

ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಹಿರಿಯ ಪತ್ರಕರ್ತರು

Share News

About Shaikh BIG TV NEWS, Hubballi

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *